ಧಾರವಾಡ: ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಅನುದಾನ ರಹಿತ ಶಾಲೆಗಳಾದ ಹಳ್ಳಿಗೇರಿಯ ಪದ್ಮರಾಜ ಪ್ರಾಥಮಿಕ (1 ರಿಂದ 8) ಶಾಲೆ, ಗರಗ ಗ್ರಾಮದ ಗರಗ ವಿದ್ಯಾಮಂದಿರ (1-5) ಶಾಲೆ, ಉಪ್ಪಿನಬೆಟಗೇರಿ ಗ್ರಾಮದ ಕಲ್ಪವೃಕ್ಷ ಪ್ರಾಥಮಿಕ (1-5) ಶಾಲೆ ಮತ್ತು ಮನಸೂರಿನ ಇಕ್ರಾ ಉರ್ದು ಪ್ರಾಥಮಿಕ (1-5) ಶಾಲೆಗಳ ಮಾನ್ಯತೆ ರದ್ದುಗೊಳಿಸಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಧಾರವಾಡ ಗ್ರಾಮೀಣ ಬಿಇಒ ಆರ್.ಆರ್. ಸದಲಗಿ, 4 ನಾಲ್ಕು ಶಾಲೆಗಳನ್ನು ಕರ್ನಾಟಕ ಶಿಕ್ಷಣ ಅಧಿನಿಯಮ 1983(1995 ರ ಕರ್ನಾಟಕ ಅಧಿನಿಯಮ-1) ರ ಸೆಕ್ಷೆನ್ 39 (2) ರಂತೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಅಧಿಸೂಚನೆ ಪತ್ರದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಮಾನ್ಯತೆ ರದ್ದುಪಡಿಸಿ ಆದೇಶ ಹೊರಡಿಸಿಸಲಾಗಿದೆ. ಈ ಶಾಲೆಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ದಾಖಲು ಮಾಡಬಾರದು ಎಂದು ತಿಳಿಸಿದ್ದಾರೆ.