ಜಿಲ್ಲೆ

ಮರಳು ಸಾಗಿಸುತ್ತಿದ್ದ 4 ಟ್ರ್ಯಾಕ್ಟರ್ ವಶಕ್ಕೆ

ಬಸವರಾಜ ವೀರಪ್ಪ ಗರಗ

ಗಜೇಂದ್ರಗಡ: ತಾಲೂಕಿನ ಹಳ್ಳಗಳ ಒಡಲನ್ನು ಬಗೆದು ಅಕ್ರಮ ಮರಳು ಸಾಗಿಸುತ್ತಿದ್ದ ನಾಲ್ಕು ಟ್ರ್ಯಾಕ್ಟರ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಕ್ರಮವಾಗಿ ಸಾಗಿಸುತ್ತಿದ್ದ ಟ್ರ್ಯಾಕ್ಟರ್​ಗಳನ್ನು ವಶಕ್ಕೆ ಪಡೆದು ಒಂದು ಟ್ರ್ಯಾಕ್ಟರ್​ಗೆ 10 ಸಾವಿರ ರೂ, ನಂತೆ ದಂಡ ವಿಧಿಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪಿಎಸ್​ಐ ಸೋಮನಗೌಡ ಗೌಡ್ರ ತಿಳಿಸಿದ್ದಾರೆ.