ಕಬ್ಬೂರ: ಸರ್ಕಾರದ ಅನುದಾನ ಸಮರ್ಪಕವಾಗಿ ಬಳಸಿ ಅಭಿವೃದ್ಧಿ ಮಾಡಿದ್ದರಿಂದ ಕ್ಷೇತ್ರದ ಜನ ನಾಲ್ಕು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿ ಜನಸೇವೆಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಸಮೀಪದ ಮಮದಾಪುರ (ಕೆಕೆ), ಪೋಗತ್ಯಾನಟ್ಟಿ, ವಿಜಯನಗರ ಹಾಗೂ ಉಮರಾಣಿ ಗ್ರಾಮಗಳಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ರಾಯಬಾಗ ಕ್ಷೇತ್ರದ ಚಿಕ್ಕೋಡಿ ತಾಲೂಕಿಗೆ ೨.೪೦ ಕೋಟಿ ರೂ. ವಿಶೇಷ ಅನುದಾನ ಮಂಜೂರಾಗಿದ್ದು, ಗ್ರಾಮೀಣ ರಸ್ತೆ ಮತ್ತು ಮೂಲಸೌಕರ್ಯ ಒದಗಿಸಲಾಗುವುದು ಎಂದರು.
ಮಮದಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ೫೦ ಲಕ್ಷ ರೂ., ಪೋಗತ್ಯಾನಟ್ಟಿ, ವಿಜಯನಗರ ಸಿಸಿ ರಸ್ತೆ ಕಾಮಗಾರಿಗೆ ತಲಾ ೫೦ ಲಕ್ಷ ರೂ., ನಾಗರಮುನ್ನೋಳ್ಳಿ ಗ್ರಾಮದ ಬಸಗೌಡ ತೋಟದಿಂದ ಎನ್‌ಎಂ ರಸ್ತೆವರೆಗೆ ನಿರ್ಮಾಣಕ್ಕೆ ೫೦ ಲಕ್ಷ ರೂ. ಹಾಗೂ ಉಮರಾಣಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ ೪೦ ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಬಿಜೆಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಕಾಳನ್ನವರ ಮಾತನಾಡಿ, ಶಾಸಕ ದುರ್ಯೋಧನ ಐಹೊಳೆ ಕ್ಷೇತ್ರದ ಜನರ ಬೇಡಿಕೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಹಿರಾ ಶುಗರ್ಸ್ ನಿರ್ದೇಶಕ ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ಮಲ್ಲೇಶ ಹನುಮಂತಗೋಳ, ಮಹಾಂತೇಶ ಶಿರಗೂರ, ಸಿದ್ದು ಖಿಂಡಿ, ರಬಸಿದ್ದ ವಡೇರಟ್ಟಿ, ಭೀರಪ್ಪ ಡೋಣಿ, ಬಸು ಬೆಕ್ಕೇರಿ, ಮಲ್ಲಪ್ಪ ರಂಗಾಪುರೆ, ಶಿವಗೌಡ ರುದ್ರನ್ನವರ, ಶಿವಾನಂದ ಪಾಟೀಲ, ಲಕ್ಷ್ಮಣ ಹನುಮನ್ನವರ, ಅಪ್ಪಾಸಾಹೇಬ ಶಿರಗೂರ, ಎಸ್.ಎಸ್.ಹೊಸಮನಿ, ತಮ್ಮಣ್ಣ ಗಾಡಿವಡ್ಡರ, ಮಹಾದೇವ ಜಿವಣಿ, ಬಸಲಿಂಗ ಕಾಡೇಶಗೋಳ, ಕಿರಣ ಗುರಸಿದ್ದನವರ ಇತರರಿದ್ದರು.