ಜಿಲ್ಲೆ

ರಾಮನಾಥಪುರ ಕೆರೆಯಲ್ಲಿ ಇನ್ನಿಬ್ಬರ ಶವ ಪತ್ತೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ/ಕುಂದಾಣ
ದೇವನಹಳ್ಳಿ ತಾಲೂಕು ಕುಂದಾಣ ಹೋಬಳಿ ರಾಮನಾಥಪುರ ಕೆರೆಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮತ್ತೆರಡು ಶವಗಳನ್ನು ಸೋಮವಾರ ಅಗ್ನಿಶಾಮಕ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
ಇಸ್ರಾಲ್ ಅಹಮದ್ (18) ಹಾಗೂ ೈಜಲ್ ಖಾನ್ (18) ಎಂಬುವರ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಕಾಶ್ ಆಸ್ಪತ್ರೆಗೆ ರವಾನಿಸಲಾಯಿತು. ಭಾನುವಾರ ಶೇಖ್ ತಾಯರ್ (18) ಹಾಗೂ ತೋಯಿದ್ (18) ಎಂಬುವರ ಶವ ಪತ್ತೆಯಾಗಿತ್ತು.
ಏನಿದು ಘಟನೆ: ಬೆಂಗಳೂರಿನ ಆರ್‌ಟಿ ನಗರದ ನಾಲ್ವರು ಸ್ನೇಹಿತರು ಭಾನುವಾರ 2 ದ್ವಿಚಕ್ರ ವಾಹನಗಳಲ್ಲಿ ನಂದಿಬೆಟ್ಟಕ್ಕೆ ತೆರಳಿದ್ದರು. ಅಲ್ಲಿಂದ ಬೆಂಗಳೂರಿಗೆ ವಾಪಸಾಗುವಾಗ ದಾರಿ ಮಧ್ಯೆ ರಾಮನಾಥಪುರ ಕೆರೆಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಭಾನುವಾರ ಶೋಧ ನಡೆಸಿದ್ದರು. ಈ ವೇಳೆ ಇಬ್ಬರ ಶವ ಪತ್ತೆಯಾಗಿತ್ತು. ತಡರಾತ್ರಿಯಾದ ಕಾರಣ ಶೋಧ ಕಾರ್ಯ ಸ್ಥಗಿತಗೊಳಿಸಿ ಸೋಮವಾರ ಬೆಳಗ್ಗೆ ಮುಂದುವರಿಸಿದ್ದರು.
10 ಗಂಟೆಯಲ್ಲಿ ಸ್ಟೇಟಸ್: ನಾಲ್ವರೂ ಸ್ನೇಹಿತರು ಭಾನುವಾರ ಬೆಳಗ್ಗೆ 10 ಗಂಟೆ ವೇಳೆಗೆ ನಂದಿಬೆಟ್ಟದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸ್ಟೇಟಸ್ ಹಾಕಿಕೊಂಡಿದ್ದರು. ಬಳಿಕ 11 ಗಂಟೆ ಸುಮಾರಿಗೆ ಕೆರೆಯೊಂದರ ಬಳಿ ನಾಲ್ವರು ಇರುವ ೆಟೋವನ್ನು ಸ್ಟೇಟಸ್‌ಗೆ ಹಾಕಿದ್ದರು. ಮಧ್ಯಾಹ್ನದ ಹೊತ್ತಿಗೆ ಮನೆಗೆ ಮರಳುವುದಾಗಿ ಪಾಲಕರಿಗೆ ತಿಳಿಸಿದ್ದರು ಎನ್ನಲಾಗಿದೆ.

ಎಲ್ಲರ ಪೋನ್ ಸ್ವಿಚ್ಡ್‌ಆ್: ಮಕ್ಕಳು ಮನೆಗೆ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಪಾಲಕರು ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್‌ಆ್ ಆಗಿರುವುದು ಗೊತ್ತಾಗಿದೆ. ಗಾಬರಿಗೊಂಡ ಪಾಲಕರು ಈ ಮೊದಲು ಸ್ಟೇಟಸ್ ಹಾಕಿಕೊಂಡಿದ್ದ ಕೆರೆ ಜಾಗ ಹುಡುಕಿಕೊಂಡು ದೇವನಹಳ್ಳಿ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಸ್ಥಳೀಯರ ಮಾಹಿತಿ ಆಧರಿಸಿ ಕುಂದಾಣ ಹೋಬಳಿ ರಾಮನಾಥಪುರ ಕೆರೆ ಬಳಿ ಹುಡುಕಾಡಿದ್ದಾರೆ. ಈ ವೇಳೆ ಹುಡುಗರ ಎರಡು ಬೈಕು, ಶೂ, ಚಪ್ಪಲಿ ಪತ್ತೆಯಾದಾಗ ಮೃತಪಟ್ಟಿರುವುದು ಖಚಿತವಾಗಿದೆ.

ಠಾಣೆಗೆ ದೂರು: ಪಾಲಕರು ವಿಶ್ವನಾಥಪುರ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕೆರೆಯಲ್ಲಿ ಶೋಧ ನಡೆಸಿದ್ದಾರೆ. ಕೆಲವು ತಾಸುಗಳ ಬಳಿಕ ಇಸ್ರಾಲ್ ಅಹಮದ್ ಹಾಗೂ ೈಜಲ್ ಖಾನ್ ಶವ ಪತ್ತೆಯಾಗಿವೆ. ಅವರು ಧರಿಸಿದ್ದ ಬಟ್ಟೆಯ ಜೇಬಿನಲ್ಲಿ ಮೊಬೈಲ್‌ಗಳು ಪತ್ತೆಯಾಗಿವೆ.

15 ಅಡಿ ಆಳ: ರಾಮನಾಥಪುರ ಕೆರೆಯಲ್ಲಿ ಸುಮಾರು 15 ಅಡಿಯಷ್ಟು ಆಳದಲ್ಲಿ ನೀರು ತುಂಬಿಕೊಂಡಿದೆ. ಈ ನಾಲ್ವರಿಗೂ ಈಜು ಬರುತ್ತಿರಲಿಲ್ಲ. ಕೆರೆ ದಡದಲ್ಲಿ ಮೋಜು ಮಾಡಲು ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಕಾಶ್ ಆಸ್ಪತ್ರೆಗೆ ಶ್‌ಟಿ: ಪೊಲೀಸರು ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ದೇವನಹಳ್ಳಿ ಆಕಾಶ್ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ: ಮುಸ್ಲಿಂ ಸಮುದಾಯದ ನಾಲ್ವರು ವಿದ್ಯಾರ್ಥಿಗಳು ಪಿಯುಸಿ ಓದುತ್ತಿದ್ದರು. ಎಲ್ಲರೂ ಒಂದೇ ಬೀದಿಯಲ್ಲಿ ವಾಸವಿದ್ದು ಆತ್ಮೀಯ ಸ್ನೇಹಿತರಾಗಿದ್ದರು. ಕೆರೆಯಿಂದ ಶವಗಳನ್ನು ಹೊರತೆಗೆಯುತ್ತಿದ್ದಂತೆ ಪಾಲಕರ ದುಃಖ ಮುಗಿಲುಮುಟ್ಟಿತ್ತು.