ಹಾಸನ; ಆಸ್ತಿ ವಿಚಾರವಾಗಿ ನಡೆದ ಗಲಾಟೆ ನಾಲ್ವರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರಗೌಡನಹಳ್ಳಿಯಲ್ಲಿ ಸೋಮವಾರ ನಡೆದಿದೆ.
ಎರಡೂ ಕಾಲು ಎಕರೆ ಜಮೀನಿಗಾಗಿ ಗ್ರಾಮದಲ್ಲಿ ಪಾಪಣ್ಣ ಹಾಗು ಮಲ್ಲೇಶ್ ಕುಟುಂಬದ ನಡುವೆ ಜಗಳವಿತ್ತು. ಇಂದು ಮಲ್ಲೇಶ್ ಪರವಾಗಿ ನ್ಯಾಯಲಯದ ತೀರ್ಪು ಬಂದಿದ್ದರಿಂದ ಪಾಪಣ್ಣ ಹಾಗೂ ಸ್ವಾಮಿ ಗೌಡರ ಎನ್ನುವರು ಮಲ್ಲೇಶ ಕುಟುಂಬದ ಜೊತೆ ಜಮೀನಿನ ಬಳಿ ಜಗಳ ತೆಗೆದಿದ್ದಾರೆ. ಘಟನೆಯಲ್ಲಿ ರವಿಕುಮಾರ್ (35) ಮಲ್ಲೇಶ(58), ಮಂಜೇಶ (35) ಮೃತಪಟ್ಟಿದ್ದಾರೆ. ಎದುರು ಗುಂಪಿನ ಪಾಪಣ್ಣ (45) ಕೂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆ ಗೆ ರವಾನಿಸಲಾಗಿದೆ. ಸ್ಥಳಕ್ಕೆ ಹೊಳೆನರಸೀಪುರ ಪೊಲೀಸ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಈ ಘಟನೆ ಹಾಸನ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದ್ದು ಆಸ್ತಿಗಾಗಿ ದಾಯಾದಿಗಳು ಯಾವ ಮಟ್ಟಕ್ಕಾದರೂ ಹೋಗುತ್ತಾರೆ ಎಂಬುದನ್ನು ತೋರಿಸಿದೆ.