ಕೊಡಗು-ಮೈಸೂರು ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ಶುಕ್ರವಾರ ಕೊಪ್ಪದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ವಾಹನದಲ್ಲಿ ದಾಖಲೆ ಇಲ್ಲದ 4 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿ ಪೂವಯ್ಯ ವಶಪಡಿಸಿಕೊಂಡು ಪೊಲೀಸರಿಗೆ ಹಸ್ತಾಂತರ ಮಾಡಿದರು. ಉಮಾ, ಅರುಣ್, ಜಯಪ್ರಕಾಶ್, ಶಶಿಕುಮಾರ್ ಇತರರು ಇದ್ದರು. 
ಜಿಲ್ಲೆ

ದಾಖಲೆ ಇಲ್ಲದ 4 ಲಕ್ಷ ರೂ. ವಶ

ನಾಗೇಶ ಎಸ್

ಕುಶಾಲನಗರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು-ಮೈಸೂರು ಗಡಿಭಾಗದ ತಪಾಸಣಾ ಕೇಂದ್ರದಲ್ಲಿ ಶುಕ್ರವಾರ ಕೊಪ್ಪದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ವಾಹನದಲ್ಲಿ ದಾಖಲೆ ಇಲ್ಲದ ನಗದು ಪತ್ತೆಯಾಗಿದೆ. ದಾವಾ ನೋರ್ಬು ಎಂಬುವರ ಬಳಿಯಿದ್ದ 4 ಲಕ್ಷ ರೂ. ಅನ್ನು ಕುಶಾಲನಗರ ತಪಾಸಣಾ ಕೇಂದ್ರದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಣವನ್ನು ಕುಶಾಲನಗರದ ಖಜಾನೆಯಲ್ಲಿ ಜಮಾ ಮಾಡಲಾಗಿದ್ದು, ಸೂಕ್ತ ದಾಖಲೆ ಒದಗಿಸಿದರೆ ವಾಪಸ್ ನೀಡಲಾಗುವುದು ಎಂದು ಚುನಾವಣಾಧಿಕಾರಿ ಪೂವಯ್ಯ ತಿಳಿಸಿದ್ದಾರೆ ಪೊಲೀಸ್ ಸಿಬ್ಬಂದಿ ಉಮಾ, ಅರುಣ್, ಶಶಿಕುಮಾರ್, ಜಯಪ್ರಕಾಶ್ ಇತರರು ಇದ್ದರು.