Transparent umbrella under heavy rain against water drops splash background. Rainy weather concept. 
ಜಿಲ್ಲೆ

ಜಿಲ್ಲೆಯಲ್ಲಿ ೪.೯೬ ಮಿ.ಮೀ. ಮಳೆ

ಆದರ್ಶ್. ಎಂ.ಕೆ.

ಮಡಿಕೇರಿ: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೪.೯೬ ಮಿ.ಮೀ. ಮಳೆಯಾಗಿದೆ.


ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೨.೦೫ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೮.೮೩ ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೦.೮೦, ನಾಪೋಕ್ಲು ೧.೨೦, ಸಂಪಾಜೆ ೯, ಭಾಗಮಂಡಲ ೫, ವಿರಾಜಪೇಟೆ ಕಸಬಾ ೧.೨೦, ಹುದಿಕೇರಿ ೮.೧೦, ಶ್ರೀಮಂಗಲ ೨, ಪೊನ್ನಂಪೇಟೆ ೧, ಸೋಮವಾರಪೇಟೆ ಕಸಬಾ ೮.೬೦, ಶನಿವಾರಸಂತೆ ೧೧.೮೦, ಶಾಂತಳ್ಳಿ ೨೦, ಕೊಡ್ಲಿಪೇಟೆ ೫.೬೦, ಕುಶಾಲನಗರ ೧.೮೦, ಸುಂಟಿಕೊಪ್ಪ ೫.೨೦ ಮಿ.ಮೀ.ಮಳೆಯಾಗಿದೆ.


ಹಾರಂಗಿ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨,೮೫೯ ಅಡಿಗಳಾಗಿದ್ದು, ೨೮೫೮.೧೦ ಅಡಿ ನೀರಿದೆ. ಇಂದಿನ ನೀರಿನ ಒಳಹರಿವು ೨೦೦೦ ಕ್ಯೂಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೨೧೬೬ ಕ್ಯೂಸೆಕ್ ಇದೆ.