ಜಿಲ್ಲೆ

4.71 ಲಕ್ಷ ರೂ. ಮೌಲ್ಯದ ಹತ್ತು ದ್ವಿಚಕ್ರ ವಾಹನ ವಶ

ನಿಪ್ಪಾಣಿ: ವಿವಿಧ ಬೈಕ್ ಕಳ್ಳತನ ಪ್ರಕರಣದಡಿ 4.71 ಲಕ್ಷ ರೂ. ಮೌಲ್ಯದ ಹತ್ತು ದ್ವಿಚಕ್ರ ವಾಹನ ಗಳನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಹಂಚಿನಾಳ ಕೆ.ಎಸ್. ಗ್ರಾಮದ ಅಭಿಜಿತ್ ಕಾಂಬಳೆಗೆ ನೋಟಿಸ್ ನೀಡಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸ್ಥಳೀಯ ಸಿಪಿಐ ಬಿ.ಎಸ್. ತಳವಾರ ನೇತೃತ್ವದಲ್ಲಿ ಪಿಎಸ್‌ಐ ರಮೇಶ ಪವಾರ, ಎಎಸ್‌ಐ ಆರ್. ಜಿ. ಕುಂಬಾರ, ಪಿ.ಟಿ. ಮನವಡ್ಡರ, ರಾಮಗೌಡಾ ಪಾಟೀಲ, ಎಂ. ಆರ್. ಕಾಂಬಳೆ, ಆರ್.ಆರ್. ಮದನೆ, ಪಿ.ಎಲ್. ಕುದರಿ, ಎಂ.ಎ. ತೇರದಾಳ ಪೊಲೀಸರ ತಂಡ ತನಿಖೆ ನಡೆಸಿ ತಾಲೂಕಿನ ಪಡಲಿಹಾಳ ಗ್ರಾಮ ಹದ್ದಿನ ಮಾಳಭಾಗದ ನಿರ್ಜನ ಪ್ರದೇಶದಲ್ಲಿ ಮುಚ್ಚಿಟ್ಟಿದ್ದ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಅಕ್ಕೋಳ ರಸ್ತೆಯ ಗಣಪತಿ ಮಂದಿರ ಹತ್ತಿರ ನಡೆದ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವೇಶ್ವರ ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.