ಎನ್.ಆರ್.ಪುರ ತಾಲೂಕು ಕಾನೂರು ಸಹಕಾರ ಸಂಘದ ಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಎಂ.ಜಿ.ಪ್ರಶಾಂತ್ ಮಾತನಾಡಿದರು. ಎಚ್.ಕೆ.ಬಾಲಚಂದ್ರ, ತಮ್ಮಯ್ಯ, ಜಿ.ಸಿ.ಗಣೇಶ, ಪ್ರೇಮಾ, ಯೋಗೀಶ್ ಇತರರಿದ್ದರು. 
ಜಿಲ್ಲೆ

ಕಾನೂರು ಪಿಎಸಿಎಸ್‌ಗೆ 4.60 ಲಕ್ಷ ರೂ. ಲಾಭ

ಎನ್.ಆರ್.ಪುರ: ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23ನೇ ಸಾಲಿನಲ್ಲಿ 17.48 ಕೋಟಿ ರೂ. ವ್ಯವಹಾರ ನಡೆಸಿ 4.60 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಜಿ.ಪ್ರಶಾಂತ್ ತಿಳಿಸಿದರು.

ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಸಂಘ ಪ್ರಸಕ್ತ ಸಾಲಿನಲ್ಲಿ 352 ರೈತರಿಗೆ 365.52 ಕೋಟಿ ಕೆಸಿಸಿ ಸಾಲ ನೀಡಿದೆ. 1.47 ಕೋಟಿ ರೂ. ವ್ಯಾಪಾರ ಮಾಡಲಾಗಿದೆ. ಸ್ವಂತ ಬಂಡವಾಳದಿಂದ 110 ಜನರಿಗೆ 1.10 ಕೋಟಿ ವಿವಿಧ ಯೋಜನೆಗಳ ಸಾಲ ನೀಡಿದ್ದೇವೆ. ಸಂಘದ ಉತ್ತಮ ಕಾರ್ಯ ವೈಖರಿಗೆ ಅಪೆಕ್ಸ್ ಬ್ಯಾಂಕ್‌ನ ಜಿಲ್ಲಾ ಮಟ್ಟದ ಉತ್ತಮ ಕಾರ್ಯ ವೈಖರಿ ಪ್ರಶಸ್ತಿ ಲಭಿಸಿದೆ ಎಂದರು.
ಸಂಘದ ಸಿಇಒ ಎಚ್.ಎಸ್.ಸುಪೀಲ್ ವರದಿ ಮಂಡಿಸಿದರು. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ತಟ್ಟೇಸರದ ಟಿ.ಎಸ್.ಕವನಾ, ಹಕ್ಕಲುಮನೆ ಎಚ್.ಸಿ.ನೀತಾ, 7ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಹರಾವರಿ ಗ್ರಾಮದ ಕೆ.ಜಿ.ಪ್ರತೀಕ್ಷಾ, ಕಾನೂರು ಗ್ರಾಮದ ಆದ್ಯಾ ಅವರನ್ನು ಪುರಸ್ಕರಿಸಲಾಯಿತು.
ಉಪಾಧ್ಯಕ್ಷ ಎಚ್.ಕೆ.ಬಾಲಚಂದ್ರ, ನಿರ್ದೇಶಕರಾದ ಟಿ.ಹಿರಿಯಣ್ಣ, ತಮ್ಮಯ್ಯ, ಬಿ.ಜಿ.ಹಿರಿಯಣ್ಣ, ಜಿ.ಸಿ.ಗಣೇಶ, ಡಿ.ಸಿ.ನಂದಿನಿ, ಪ್ರೇಮಾ, ಯೋಗೀಶ್, ಕೆ.ಎನ್.ಚಂದ್ರಶೇಖರ್, ರಮೇಶ್, ಮೇಲ್ವಿಚಾರಕ ಎಂ.ಡಿ.ರಾಜೇಶ್ ಇದ್ದರು.