ಜಿಲ್ಲೆ

4, 5ರಂದು ಕಬಡ್ಡಿ ಪಂದ್ಯಾವಳಿ

ಸೋಮವಾರಪೇಟೆ: ಒಕ್ಕಲಿಗರ ಯುವವೇದಿಕೆ ಸೋಮವಾರಪೇಟೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ 4ನೇ ವರ್ಷದ ಒಕ್ಕಲಿಗರ ಕಪ್ ಅಂತಾರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾವಳಿಯನ್ನು ಮಾ.4, 5ರಂದು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್ ಹೇಳಿದರು.

ಪಂದ್ಯಾಟದಲ್ಲಿ ಮಹಾರಾಷ್ಟ, ಹರಿಯಾಣ, ಯುವ ಪಲ್ಟಾನ್ ಪುಣೆ, ಸೌತ್‌ಸೆಂಟ್ರಲ್ ರೈಲ್ವೆ ಹೈದರಾಬಾದ್, ತಮಿಳುನಾಡು, ಜೆ.ಕೆ.ಅಕಾಡೆಮಿ ಕೇರಳ, ಏರ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಪೊಲೀಸ್, ಕಸ್ಟಮ್ಸ್ ಮತ್ತು ಜಿಎಸ್‌ಟಿ ತಂಡ, ಕರ್ನಾಟಕ ತಂಡ, ಚೈನ್ಸ್ ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರೊ ಕಬಡ್ಡಿಯಲ್ಲಿ ಖ್ಯಾತಿ ಗಳಿಸಿರುವ ಆಟಗಾರರಾದ ಸಿದ್ದಾರ್ಥ್ ದೇಸಾಯಿ, ಅಜಯ್ ಠಾಕೂರ್, ಸುಕೇಶ್‌ಹೆಗಡೆ, ಪ್ರಶಾಂತ್ ರೈ, ಆಕಾಶ್ ಶಿಂದೆ, ಪ್ರಪಂಚನ್, ಅಸ್ಲಾಂ ಇನಾಂದರ್, ಶ್ರೀಕಾಂತ್ ಜಾದವ್, ಅಜಿತ್, ಚಂದ್ರನ್ ರಂಜಿತ್ ಮತ್ತಿತರ ಆಟಗಾರರು ಭಾಗವಹಿಸಲಿದ್ದಾರೆ. ಪ್ರಥಮ ಬಹುಮಾನ 2 ಲಕ್ಷ ರೂ.ನಗದು, ದ್ವಿತೀಯ 1 ಲಕ್ಷ ರೂ.ನಗದು, ತೃತೀಯ ಮತ್ತು ಚತುರ್ಥ ಬಹುಮಾನ 50 ಸಾವಿರ ರೂ. ನಗದು ಹಾಗೂ ಅಕರ್ಷಕ ಟ್ರೋಫಿ ನೀಡಲಾಗುತ್ತದೆ.

4 ರಂದು 11ಗಂಟೆಗೆ ಕ್ರೀಡಾಪಟು ಕೆ.ಎ.ಪ್ರಕಾಶ್ ನೇತೃತ್ವದಲ್ಲಿ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತರಲಾಗುತ್ತದೆ. ನಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಗಳು ನಡೆಯಲಿವೆ. ರಾತ್ರಿ ಅಂತಾರಾಜ್ಯ ಮಟ್ಟದ ಪಂದ್ಯಾವಳಿಗಳು ನಡೆಯಲಿವೆ. 10 ಸಾವಿರ ಜನರು ಕುಳಿತುಕೊಳ್ಳಲು ಗ್ಯಾಲರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಹೆಚ್ಚಿನ ಮಾಹಿತಿಗೆ ಕೆ.ಬಿ.ಸುರೇಶ್ ಮೊ: 94484 33294 ಸಂಪರ್ಕಿಸಬಹುದು ಎಂದು ತಿಳಿಸಿದರು.

ಉಪಾಧ್ಯಕ್ಷ ಎಚ್.ಕೆ. ಪೃಥ್ವಿ, ಕಾರ್ಯದರ್ಶಿ ಯೋಗೇಂದ್ರ ಚೌಡ್ಲು, ಪದಾಧಿಕಾರಿಗಳಾದ ಎಚ್.ಕೆ.ತ್ರಿಶೂಲ್, ಡಿ.ಎ.ದೇವರಾಜ್ ಇದ್ದರು.