ಜಿಲ್ಲೆ

4.30 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಪಾರ್ಟ್ ಟೈಂ ಜಾಬ್ ಮಾಡಿದರೆ ದಿನಕ್ಕೆ ನಾಲ್ಕು ಸಾವಿರ ರೂ. ಗಳಿಸಬಹುದು ಎಂದು ಯುವತಿಯನ್ನು ನಂಬಿಸಿದ ವಂಚಕರು, ಆಕೆಯ ಅಕೌಂಟ್​ನಿಂದ ಆನ್​ಲೈನ್ ಮೂಲಕ 4.30 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಧಾರವಾಡದ ಯುವತಿಯನ್ನು ವಾಟ್ಸ್​ಆಪ್ ಮೂಲಕ ಪರಿಚಯ ಮಾಡಿಕೊಂಡ ಖದೀಮರು, ಮೊದಲು ಲಾಭದಾಸೆ ತೋರಿಸಿದ್ದಾರೆ. ಆ ಮೇಲೆ ಹಂತ ಹಂತವಾಗಿ 4.30 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.