ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರ ಸಂಘದ 7ನೇ ವಾರ್ಷಿಕ ಸಭೆ ನಾಪೋಕ್ಲು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಅಧ್ಯಕ್ಷ ಅಪ್ಪಾರಂಡ.ಎಸ್.ಅಯ್ಯಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು. 
ಜಿಲ್ಲೆ

ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಂಘಕ್ಕೆ 4.12 ಲಕ್ಷ ರೂ. ಲಾಭ

ನಾಪೋಕ್ಲು: ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ 7ನೇ ವಾರ್ಷಿಕ ಸಭೆ ಆಯೋಜಿಸಲಾಗಿತ್ತು.

ಅಧ್ಯಕ್ಷ ಅಪ್ಪಾರಂಡ.ಎಸ್.ಅಯ್ಯಪ್ಪ ಮಾತನಾಡಿ, ಸಂಘದಲ್ಲಿ ಒಟ್ಟು 793 ಸದಸ್ಯರು ಇದ್ದಾರೆ. ಈ ಸಾಲಿನಲ್ಲಿ 4.12 ಲಕ್ಷ ರೂ. ಲಾಭ ಗಳಿಸಿದ್ದು, ಉತ್ತಮ ರೀತಿಯಲ್ಲಿ ಸಾಗಿದೆ. 2024-2025ನೇ ಸಾಲಿನನಲ್ಲಿ 10 ಸೆಂಟ್ ನಿವೇಶನ ಖರೀದಿಸಿರುವ ಬಗ್ಗೆ ಮಾಹಿತಿ ನೀಡಿದರು.

ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ.ಸಿ.ನಾಣಯ್ಯ, ನಿರ್ದೇಶಕರಾದ, ಬಿದ್ದಾಟಂಡ ರಮೇಶ್ ಚಂಗಪ್ಪ, ಬೊಳ್ಯಯಂಡ.ಪಿ.ಹರೀಶ್ ಕಾರ್ಯಪ್ಪ, ಕನ್ನಂಬೀರ.ಸಿ.ತಿಮ್ಮಯ್ಯ, ಕುಂಡ್ಯೋಳಂಡ.ಸಿ.ಪೂವಯ್ಯ, ಕಾಟುಮಣಿಯಂಡ ಎಂ.ಉಮೇಶ್, ಅರೇಯಡ.ಎಂ.ಆಶೋಕ, ಚೋಕಿರ.ಎಸ್.ಚಿಣ್ಣಪ್ಪ, ಚೇನಂಡ, ಇ.ಗಿರೀಶ್ ಪೂಣಚ್ಚ, ಕುಲ್ಲೇಟ್ಟಿರ ಎಂ.ದೇವಯ್ಯ, ಪಾಡೆಯಂಡ.ಸಿ.ಕುಶಾಲಪ್ಪ, ಮೂವೇರ ರೇಖಾ ಪ್ರಕಾಶ್, ಕೋಟೇರ. ನೈಲಾ ಚಂಗಪ್ಪ, ಮುಖ್ಯಕಾರ್ಯನಿರ್ವಹಕರಾದ ಎಸ್.ಪಿ.ದೇವಯ್ಯ, ಕೆ.ಜಿ.ಸರಸ್ವತಿ, ಸಹನಾ ಎನ್.ವಿ. ಇದ್ದರು.