ಜಿಲ್ಲೆ

ಬಾಲಕನಿಗೆ ಕೊಡವಾಮೆ ಸಂಘಟನೆ ನೆರವು


ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕ ಬೊಜ್ಜಂಗಡ ಜೆಷ್ ಬಿದ್ದಪ್ಪ ಚಿಕಿತ್ಸೆಗೆ ಉದಿಯಂಡ ಎ.ಸೋಮಣ್ಣ ಮುಂದಾಳತ್ವದ ಕೊಡವಾಮೆ ಸಂಘಟನೆ 4.10 ಲಕ್ಷ ರೂ. ಆರ್ಥಿಕ ನೆರವು ನೀಡಿದೆ.
ಬಾಲಕನ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿಯೇ ಸಂಘಟನೆಯಿಂದ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗಿತ್ತು. ಒಟ್ಟು 3,68,074.12 ರೂ. ದಾನಿಗಳಿಂದ ಸಂಗ್ರಹವಾಗಿತ್ತು. 42 ಸಾವಿರ ರೂ. ನಗದು ರೂಪದಲ್ಲಿ ಸಂಗ್ರಹವಾಗಿತ್ತು. ಆರ್ಥಿಕ ನೆರವನ್ನು ಜೆಷ್ ತಾಯಿ ಬೊಜ್ಜಂಗಡ ದೇವಕ್ಕಿ ಅವರಿಗೆ ಹಸ್ತಾಂತರಿಸಲಾಗಿದೆ.