ವಿಜಯವಾಣಿ ಸುದ್ದಿಜಾಲ ಕಾರವಾರ
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಗೆ 54 ಕ್ಷೇತ್ರಗಳು ಹಾಗೂ 12 ತಾಲೂಕು ಪಂಚಾಯಿತಿಗಳಿಗೆ ಒಟ್ಟು 121 ಏಕ ಸದಸ್ಯ ಕ್ಷೇತ್ರಗಳನ್ನು ರಚಿಸಿ, ಗ್ರಾಮಗಳನ್ನು ವಿಂಗಡಿಸಿ ಜ.2 ರಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಕರಡು ಅಽಸೂಚನೆ ಹೊರಡಿಸಿದೆ. ಆಕ್ಷೇಪಣೆಗಳನ್ನು ಸಲ್ಲಿಸಲು ಜ.16 ರವರ ಸಾಯಂಕಾಲ 5 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ವೆಬ್‌ಸೈಟ್ ವಿಳಾಸ ಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಈ ಹಿಂದೆ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಗೆ 39 ಕ್ಷೇತ್ರಗಳಿದ್ದವು. ಅದನ್ನು 54 ಕ್ಕೆ ಏರಿಸಲಾಗಿದೆ. 11 ತಾಲೂಕು ಪಂಚಾಯಿತಿಗಳಿಗೆ ಸಂಬಂಧಿಸಿದಂತೆ 111 ಸದಸ್ಯ ಸ್ಥಾನಗಳಿದ್ದವು. ಹೊಸದಾಗಿ ರಚನೆಯಾದ ದಾಂಡೇಲಿಗೆ 7 ಸದಸ್ಯ ಸ್ಥಾನ ನಿಗದಿ ಮಾಡಲಾಗಿದ್ದು, ಜೊಯಿಡಾ, ಯಲ್ಲಾಪುರ, ಮುಂಡಗೋಡ,ಹಳಿಯಾಳ,ಸಿದ್ದಾಪುರ, ಅಂಕೋಲಾ, ಕಾರವಾರ ತಾಪಂಗಳಿಗೆ ಈ ಹಿಂದೆ ಇದ್ದ 11 ಸದಸ್ಯ ಸ್ಥಾನವನ್ನು ತಲಾ 9 ಕ್ಕೆ ಇಳಿಸಿ, ಕ್ಷೇತ್ರ ವಿಂಗಡನೆ ಮಾಡಲಾಗಿದೆ. ಭಟ್ಕಳ-12, ಶಿರಸಿ, ಕುಮಟಾ, ಹೊನ್ನಾವರ ತಾಪಂಗಳಿಗೆ ತಲಾ 13 ಕ್ಷೇತ್ರಗಳಾಗಿ ವಿಂಗಡನೆ ಮಾಡಲಾಗಿದೆ.
54 ಜಿಪಂ ಕ್ಷೇತ್ರಗಳು
ಜೊಯಿಡಾ ತಾಲೂಕಿನಲ್ಲಿ ರಾಮನಗರ, ಜಗಲಬೇಟ, ಜೊಯಿಡಾ, ದಾಂಡೇಲಿ ತಾಲೂಕಿನಲ್ಲಿ ಅಂಬಿಕಾನಗರ, ಹಳಿಯಾಳ ತಾಲೂಕಿನಲ್ಲಿ ಮಂಗಳವಾಡ, ತೆರಗಾಂವ, ಗುಂಡೊಳ್ಳಿ, ಮುರ್ಕವಾಡ, ಕಾರವಾರದಲ್ಲಿ ಮಲ್ಲಾಪುರ, ಮುಡಗೇರಿ, ಚಿತ್ತಾಕುಲಾ, ಚೆಂಡಿಯಾ, ಕಡವಾಡ, ಯಲ್ಲಾಪುರದಲ್ಲಿ ಇಡಗುಂದಿ, ಕಿರವತ್ತಿ, ಕಂಪ್ಲಿ, ಮುಂಡಗೋಡಿನಲ್ಲಿ ಮೈನಳ್ಳಿ, ಇಂದೂರ, ಪಾಳಾ, ಮಳಗಿ, ಅಂಕೋಲಾದಲ್ಲಿ ಅಗಸೂರು, ಅವರ್ಸಾ, ಅಂಕೋಲಾದಲ್ಲಿ ಬಾವಿಕೇರಿ, ಶೆಟಗೇರಿ, ಬೆಳಸೆ, ಶಿರಸಿಯಲ್ಲಿ ಹುಲೇಕಲ್, ದೊಡ್ನಳ್ಳಿ, ಬದನಗೋಡ, ಬನವಾಸಿ, ಜಾನ್ಮನೆ, ಶಿವಳ್ಳಿ, ಕುಮಟಾದಲ್ಲಿ ಮೂರೂರು, ಹೆಗಡೆ, ಮಿರ್ಜಾನ, ಹೊಲನಗದ್ದೆ, ಗೋಕರ್ಣ, ದೇವಗಿರಿ, ಸಿದ್ದಾಪುರದಲ್ಲಿ ಅಣಲೇಬೈಲ್, ಕಾನಗೋಡ, ಹಲಗೇರಿ, ದೊಡ್ಮನೆ, ಹೊನ್ನಾವರದಲ್ಲಿ ನಗರ ಬಸ್ತಿಕೇರಿ, ಚಂದಾವರ, ಹಳದೀಪುರ, ಮುಗ್ವಾ, ಮಾವಿನಕುರ್ವಾ, ಕಾಸರಕೋಡ, ಬಳಕೂರು, ಭಟ್ಕಳದಲ್ಲಿ ಮಾವಳ್ಳಿ-1, ಕಾಯ್ಕಿಣಿ, ಶಿರಾಲಿ, ಹೆಬಳೆ, ಬಿಳಲಖಂಡ, ಬೆಳಕೆ ಕ್ಷೇತ್ರಗಳನ್ನು ರಚಿಸಲಾಗಿದೆ.
121 ತಾಪಂ ಕ್ಷೇತ್ರಗಳು
ಜೊಯಿಡಾ ತಾಲೂಕಿನಲ್ಲಿ ಅಖೇತಿ, ಕಲಂಬುಲಿ, ರಾಮನಗರ, ಜಗಲಬೇಟ,ಅಸು,ಪ್ರಧಾನಿ, ಕಾತೇಲಿ, ಜೊಯಿಡಾ, ನಂದಿಗದ್ದೆ , ದಾಂಡೇಲಿ ತಾಲೂಕಿನಲ್ಲಿ ವಿಟ್ನಾಳ, ಕೇರವಾಡ, ಅಂಬೇವಾಡಿ, ಬಡಾಕಾನಶಿರಡಾ, ಬೊಮ್ಮನಳ್ಳಿ, ಜಮಗಾ, ಅಮಗಾ, ಹಳಿಯಾಳ ತಾಲೂಕಿನಲ್ಲಿ ಮಂಗಳವಾಡ, ಮದನಳ್ಳಿ, ತೇರಗಾಂವ, ಬುಜೂರ ಕಂಚನಳ್ಳಿ, ಗುಂಡೋಳ್ಳಿ, ತಟ್ಟಿಗೇರಿ, ನಾಗಶೆಟ್ಟಿಕೊಪ್ಪ, ಮುರ್ಕವಾಡ, ಕಾವಲವಾಡ, ಕಾರವಾರ ತಾಲೂಕಿನಲ್ಲಿ ಮಾಜಾಳಿ, ಮುಡಗೇರಿ, ಘಾಡಸಾಯಿ ಗೋಟೆಗಾಳಿ, ಮಲ್ಲಾಪುರ, ದೇವಳಮಕ್ಕಿ, ಚಿತ್ತಾಕುಲಾ, ಕಡವಾಡ, ಚೆಂಡಿಯಾ, ಯಲ್ಲಾಪುರ ತಾಲೂಕಿನಲ್ಲಿ ಕಣ್ಣಿಗೇರಿ, ಕಿರವತ್ತಿ, ಮದನೂರು, ನಂದೊಳ್ಳಿ, ಇಡಗುಂದಿ, ಮಾವಿಮನಮನೆ, ಕಂಪ್ಲಿ, ಕುಂದರಗಿ, ಶೀಗೇಮನೆ, ಮುಂಡಗೋಡ ತಾಲೂಕಿನಲ್ಲಿ ಹುನಗುಂದ, ಬಾಚಣಕಿ, ಇಂದೂರು, ಗುಂಜಾವತಿ, ಚವಡಳ್ಳಿ, ಚಿಗಳ್ಳಿ, ಪಾಳಾ, ಕೋಡಂಬಿ, ಮಳಗಿ, ಅಂಕೋಲಾ ತಾಲೂಕಿನಲ್ಲಿ ಅಗಸೂರು, ಅವರ್ಸಾ, ಬೆಂಳAಬಾರ, ಬೇಲೆಕೇರಿ, ಬೆಳಸೆ, ಬಾವಿಕೇರಿ, ಹಿಲ್ಲೂರು, ಸಗಡಗೇರಿ, ಶೆಟಗೇರಿ, ಶಿರಸಿ ತಾಲೂಕಿನಲ್ಲಿ ಹುಲೇಕಲ್, ಭೈರುಂಬೆ, ಬಿಸಲಕೊಪ್ಪ, ಬದನಗೋಡ, ಇಸಳೂರು, ಇಟಗುಳಿ, ಶಿವಳ್ಳಿ, ದೇವನಳ್ಳಿ, ಜಾನ್ಮನೆ, ಯಡಳ್ಳಿ, ಅಂಡಗಿ, ಸುಗಾವಿ, ಬನವಾಸಿ, ಕುಮಟಾ ತಾಲೂಕಿನಲ್ಲಿ ಹನೇಹಳ್ಳಿ, ಗೋಕರ್ಣ, ಹಿರೇಗುತ್ತಿ, ಮಿರ್ಜಾನ, ಕೋಡ್ಕಣಿ, ಅಳಕೋಡ, ಹೆಗಡೆ, ಕಾಗಾಲ, ಬಾಡ, ದೇವಗಿರಿ, ವಾಲಗಳ್ಳಿ, ಮೂರೂರು, ಸಂತೆಗುಳಿ, ಸಿದ್ದಾಪುರ ತಾಲೂಕಿನಲ್ಲಿ ಹೆಗ್ಗರಣಿ, ಹಸರಗೋಡ, ಹಾರ್ಸಿಕಟ್ಟಾ, ಕಾನಗೋಡ, ಕೋಲಸಿರ್ಸಿ, ಇಟಗಿ, ಕ್ಯಾದಗಿ, ಹಲಗೇರಿ, ಮನಮನೆ, ಹೊನ್ನಾವರ ತಾಲೂಕಿನಲ್ಲಿ ಕಡತೋಕಾ, ಕಡ್ಲೆ, ಮುಗ್ವಾ, ಹಡಿನಬಾಳ, ಹಳದೀಪುರ, ಕರ್ಕಿ, ಮಾವಿನಕುರ್ವಾ, ಹೇರಂಗಡಿ, ಕಾಸರಕೋಡ, ಬಳಕೂರ,ನಗರ ಬಸ್ತಿಕೇರಿ, ಕೆಳಗಿನೂರು, ಕೊಡಾಣಿ, ಭಟ್ಕಳ ತಾಲೂಕಿನಲ್ಲಿ ಬೈಲೂರು, ಮಾವಳ್ಳಿ1, ಮಾವಳ್ಳಿ-2, ಕಾಯ್ಕಿಣಿ, ಬೇಂಗ್ರೆ, ಶಿರಾಲಿ, ಹೆಬಳೆ, ಬಿಳಲಖಂಡ, ಮಾರುಕೇರಿ, ಮುಂಡಳ್ಳಿ, ಪುರವರ್ಗ, ಬೆಳಕೆ
ತಾಲೂಕುವಾರು ಜಿಪಂ ಕ್ಷೇತ್ರಗಳ ಸಂಖ್ಯೆ
ತಾಲೂಕು ಈಗಿನ ಜಿಪಂ ಕ್ಷೇತ್ರಗಳು ಹಿಂದಿನ ಜಿಪಂ ಕ್ಷೇತ್ರಗಳು
ದಾಂಡೇಲಿ 1 0
ಜೊಯಿಡಾ 3 2
ಯಲ್ಲಾಪುರ 3 2
ಮುಂಡಗೋಡ 4 3
ಹಳಿಯಾಳ 4 4
ಸಿದ್ದಾಪುರ 4 3
ಅಂಕೊಲಾ 5 3
ಕಾರವಾರ 5 3
ಭಟ್ಕಳ 6 3
ಶಿರಸಿ 6 5
ಕುಮಟಾ 6 5
ಹೊನ್ನಾವರ 7 6