ಜಿಲ್ಲೆ

371(ಜೆ) ಅನುಷ್ಠಾನಕ್ಕೆ ಆಯೋಗ ರಚಿಸಿ

ಬೀದರ್: ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯಿಂದ ನಗರದಲ್ಲಿ ಭಾನುವಾರ ಸಂವಿಧಾನದ ಕಲಂ 371(ಜೆ) ಕಾಯ್ದೆ ಸಾಧಕ-ಬಾಧಕ ಕುರಿತು ವಿಚಾರ ಸಂಕಿರಣ ನಡೆಯಿತು. 371 (ಜೆ) ಪರಿಣಾಮಕಾರಿ ಅನುಷ್ಠಾನಕ್ಕೆ ಆಯೋಗ ರಚನೆ ಸೇರಿದಂತೆ ಪ್ರಮುಖ ನಾಲ್ಕು ನಿರ್ಣಯ ಕೈಗೊಳ್ಳಲಾಯಿತು.

ಬೀದರ್, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮುಖಂಡರ ಸಮ್ಮುಖದಲ್ಲಿ 371 (ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು. ಕಲಂ ಸಮರ್ಪಕ ಅನುಷ್ಠಾನವಾಗಿ ಈ ಭಾಗದ ಜನರಿಗೆ ಸಂವಿಧಾನಬದ್ಧ ಹಕ್ಕು, ಸೌಲಭ್ಯ ಒದಗಿಸಲು ಆಯೋಗ ರಚಿಸಬೇಕು. 371 (ಜೆ) ವ್ಯಾಜ್ಯಗಳ ನಿರ್ವಹಣೆಗಾಗಿ ಕಲಬುರಗಿಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಸ್ಥಾಪಿಸಬೇಕು. ವಿಭಾಗೀಯ ಕಚೇರಿಗಳನ್ನು ಈ ಭಾಗಕ್ಕೆ ಸ್ಥಳಾಂತರಿಸಬೇಕು. 371 (ಜೆ) ಕಾನೂನಿನಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಲು ನಿರ್ಧರಿಸಲಾಯಿತು. ಶೀಘ್ರದಲ್ಲಿ ಈ ಬೇಡಿಕೆ ಈಡೇರಿಕೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ವಿಳಂಬ ಮಾಡಿದರೆ ಹೋರಾಟ ನಡೆಸುವುದಾಗಿ ಮುಖಂಡರು ಎಚ್ಚರಿಸಿದರು.

ಸಮಿತಿ ಮುಖಂಡ ಅಬ್ದುಲ್ ರಜಾಕ್ ಉಸ್ತಾದ್ ಮಾತನಾಡಿ, ಈ ಭಾಗದ ಅಭಿವೃದ್ಧಿಯಾಗಬೇಕಾದರೆ ಒಂದು ಬೋಡ್೯ ಬೇಕು. ಕಳೆದ 7 ವರ್ಷದಿಂದ ಈ ಭಾಗಕ್ಕೆ 8650 ಕೋಟಿ ರೂ. ಅನುದಾನ ಬಂದಿದೆ. ಅದರಲ್ಲಿ 3180 ಕೋಟಿ ರೂ. ಖರ್ಚಾಗಿದೆ. ಉಳಿದ ಅನುದಾನ ಕೊಡಿ ಎಂದರೆ ನೀವು ಖರ್ಚು ಮಾಡಿದ ನಂತರ ನೀಡುತ್ತೇವೆ ಎನ್ನುತಿದ್ದಾರೆ. ನಾವು ಕಂಡಿದ್ದ ಕನಸು ನನಸಾಗುವಂಥ ಕೆಲಸ ಆಗುತ್ತಿಲ್ಲ. ನಾವು ಯಾವ ಪಕ್ಷದ ವಿರೋಧಿ ಇಲ್ಲ. ವ್ಯವಸ್ಥೆ ವಿರುದ್ಧ ಇದ್ದೇವೆ ಎಂದರು.

ಸಮಿತಿ ವಿಭಾಗೀಯ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್, ಉಪಾಧ್ಯಕ್ಷ ಪ್ರೋ.ದೇವೇಂದ್ರ ಕಮಲ ಮಾತನಾಡಿದರು. ಸಮಿತಿ ಜಿಲ್ಲಾ ಅಧ್ಯಕ್ಷ ಪಂಡಿತರಾವ ಚಿದ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ರಾಜೇಂದ್ರಕುಮಾರ ಗಂದಗೆ, ಡಾ.ಅಬ್ದುಲ್ ಖದೀರ್, ಡಾ.ಚನ್ನಬಸಪ್ಪ ಹಾಲಹಳ್ಳಿ, ಡಾ.ಜಗನ್ನಾಥ ಹೆಬ್ಬಾಳೆ, ಮನ್ನಾನ ಸೇಠ್, ಮಹ್ಮದ್ ಆಸಿಫೊದ್ದೀನ್, ಶಂಕರರಾವ ಹೊನ್ನಾ, ಮಹ್ಮದ್ ನಿಜಾಮೊದ್ದೀನ್, ಬಿ.ಜಿ.ಶೆಟಕಾರ ಇತರರಿದ್ದರು. ಡಾ. ರಾಜಕುಮಾರ ಹೆಬ್ಬಾಳೆ ನಿರೂಪಣೆ ಮಾಡಿದರು.

ಅಂದಿನ ಮಾತು ಇಂದು
ಅನುಭವಕ್ಕೆ ಬರುತ್ತಿದೆ

2013ರಲ್ಲಿ ನಮಗೆ 371(ಜೆ) ಜಾರಿಯಾದಾಗ ಎಲ್ಲಿಲ್ಲದ ಖುಷಿಯಾಗಿತ್ತು. ಆಗ ಹಮ್ಮಿಕೊಂಡ ಸಮಾರಂಭಕ್ಕೆ ತೆಲಂಗಾಣ ಸಚಿವರನ್ನು ಮುಖ್ಯ ಅತಿಥಿಯಾಗಿ ಕರೆಸಲಾಗಿತ್ತು. ಅವರು ಮಾತನಾಡುವಾ 371(ಜೆ) ಸಂಭ್ರಮ ಹೆಚ್ಚು ಬೇಡ ಎಂದು ನಮಗೆ ಎಚ್ಚರಿಕೆ ನೀಡಿದ್ದರು. ಅವರು ಆಡಿದ ಮಾತು ಈಗ ನಮ್ಮ ಅನುಭವಕ್ಕೆ ಬಂದಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಪಂಡಿತರಾವ ಚಿದ್ರಿ ಸ್ಮರಿಸಿದರು. ನಾವು 371ಗಾಗಿ 50 ವರ್ಷ ಹೋರಾಟದ್ದೇವೆ. ನಂತರ ಸರಿಯಾಗಿ ಅನುಷ್ಠಾನದ ಆಗದ ಕಾರಣ ಪ್ರತ್ಯೇಕ ರಾಜ್ಯದ ಹೋರಾಟ ಮಾಡಿದ್ದೇವೆ. ನೀವು ಸಹ ಮುಂದೆ ಅದೇ ದಾರಿ ತುಳಿಯುತ್ತೀರಿ ಎಂದು ಆವಾಗ ತೆಲಂಗಾಣ ಸಚಿವರು ಹೇಳಿದ್ದು ಇಂದು ನೆನಪಿಗೆ ಬರುತ್ತಿದೆ ಎಂದರು.

ದಿ. ವೈಜನಾಥ ಪಾಟೀಲ್ ಮುಂದಾಳತ್ವದಲ್ಲಿ ಈ ಭಾಗದ ಅಭಿವೃದ್ಧಿಗಾಗಿ ಅನೇಕರು ಹೋರಾಡಿದ್ದಾರೆ. ಕಲಂ 371 ಜಾರಿ ನಂತರವೂ ಯಾವುದೇ ಲಾಭವಾಗುತ್ತಿಲ್ಲ. ಸರ್ಕಾರದಿಂದ ಈ ಭಾಗಕ್ಕೆ ಮಲತಾಯಿ ಧೋರಣೆ ಮುಂದುವರಿದಿದೆ. ಹೋರಾಟ ಮತ್ತೆ ನಡೆಸಲು ಎಲ್ಲರ ಸಹಕಾರ ಬೇಕು.| ಅನೀಲಕುಮಾರ ಬೆಲ್ದಾರ್ಹೈಕ ಹೋರಾಟ ಸಮಿತಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ