ಕಲಬುರಗಿ: ಈಶಾನ್ಯ ಕರ್ನಾಟಕ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಮತ್ತು ೩೭೧ (ಜೆ )ಕಲಂ ಕುರಿತು ವಿಧಾನಸಭೆಯಲ್ಲಿ ಧ್ವನಿ ಎತ್ತಲು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಗೆಲುವು ಅಗತ್ಯ ಎಂದು ಮಾಜಿ ಸಚಿವ, ಶಾಸಕ ಸುರೇಶಕುಮಾರ ಹೇಳಿದರು.
ನಗರದ ನ್ಯಾಯವಾದಿಗಳ ಸಂಘದಲ್ಲಿ ಬುಧವಾರ ಏರ್ಪಡಿಸಿದ್ದ ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಮತ ಪ್ರಚಾರದಲ್ಲಿ ಮಾತನಾಡಿ, ಕಕ ಭಾಗದ ಏಳು ಜಿಲ್ಲೆಗಳ ಪದವೀಧರ ಮತ್ತು ಶಿಕ್ಷಕರ ಸಮಸ್ಯೆಗೆ ಸ್ಪಂದಿಸಲು ಬಿಜೆಪಿಗೆ ಬೆಂಬಲಿಸಬೇಕು. ಪಾಟೀಲರು ಹಿಂದೆ ವಿಧಾನಪರಿಷತ್ ಸದಸ್ಯರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಚುನಾವಣೆ ವೇಳೆ ಕೈಕುಲುಕುವ ರಾಜಕಾರಣಿ ಆಗದೆ ಜನರ ಸಮಸ್ಯೆಗೆ ಸ್ಪಂದಿಸುವ ಸಜ್ಜನ ರಾಜಕಾರಣಿ ಎಂದು ಹೇಳಿದರು.
ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಈಶಾನ್ಯ ಪದವೀಧರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲರನ್ನು ಗೆಲ್ಲಿಸಬೇಕು. ಪಾಟೀಲ್ ಆರು ವರ್ಷ ವಿಧಾನ ಪರಿಷತ್ ಸದಸ್ಯರಾಗಿ ಅನುಭವ ಹೊಂದಿದಿದ್ದಾರೆ. ಈ ಭಾಗದ ಪದವೀಧರ ಮತ್ತು ಶಿP್ಷÀಕರ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲಿಸಬೇಕು ಎಂದರು.
ಮತಪತ್ರದ ಕ್ರಮ ಸಂಖ್ಯೆ ಒಂದರಲ್ಲಿ ಅಮರನಾಥ ಪಾಟೀಲ್ ಹೆಸರಿದ್ದು, ಮೊದಲ ಆದ್ಯತೆಯ ಮತವನ್ನು ನೀಡಬೇಕು. ಇಲ್ಲಿ ಪಕ್ಷದ ಚಿಹ್ನೆ ಇರುವುದಿಲ್ಲ. ಅಭ್ಯರ್ಥಿ ಹೆಸರು, ಪಕ್ಷದ ಹೆಸರು ಇರುತ್ತದೆ. ಅದರ ಮುಂದೆ ಕನ್ನಡ ಅಥವಾ ರೋಮನ್ ಒಂದು ಅಥವಾ ಉದ್ದನೆ ಗೆರೆ ಎಳೆದು ಮತ ಚಲಾಯಿಸಬೇಕು. ರಾಷ್ಟçಪತಿ ಚುನಾವಣೆಯಲ್ಲೂ ಈ ರೀತಿ ಕ್ರಮವಿದ್ದು, ಹಲವು ಮತ ಅಸಿಂಧು ಆಗುತ್ತದೆ. ಪದವೀಧರ ಮತದಾರರು ಎಚ್ಚರಿಕೆಯಿಂದ ಒಂದು ಸಂಖ್ಯೆ ಬರೆಯಬೇಕು ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಗುಪ್ತಲಿಂಗ ಬಿರಾದಾರ, ಉಪಾಧ್ಯಕ್ಷ ಧರ್ಮಣ್ಣ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ನಾಶಿ, ನ್ಯಾಯವಾದಿಗಳಾದ ದಯಾಘನ ಧಾರವಾಡಕರ, ವಿದ್ಯಾಸಾಗರ ಕುಲಕರ್ಣಿ, ಬಿ.ಎಸ್.ಜಾಲ್ದೆ, ವಿ.ಬಿ.ಕುಲಕರ್ಣಿ, ಕಲ್ಯಾಣಪ್ಪ ವಡಗೇರ ಇತರರಿದ್ದರು.