ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗಕ್ಕೆ ಸಂವಿಧಾನದ ೩೭೧ (ಜೆ) ಕಲಂ ವಿಶೇಷ ಸ್ಥಾನ ಮಾನ ದೊರಕಿದ್ದು, ಇದರಿಂದ ರಾಜ್ಯದ ೨೪ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಸೃಷ್ಟಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ಹಕ್ಕಿನ ತಂಟೆಗೆ ಬಂದರೆ ಪ್ರತ್ಯೇಕ ರಾಜ್ಯದ ಬೇಡಿಕೆ ಮಂಡಿಸಲಾಗುವುದು ಎಂದು ನಗರದಲ್ಲಿ ಶನಿವಾರ ಹಮ್ಮಿಕೊಂಡು ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಲಾಯಿತು.
೩೭೧(ಜೆ) ಕಲಂನಿಂದ ರಾಜ್ಯದ ೨೪ ಜಿಲ್ಲೆಗೆ ಅನ್ಯಾಯವಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಹಸಿರು ಪ್ರತಿಷ್ಠಾನದಿಂದ ಹಮ್ಮಿಕೊಂಡ ಪ್ರತಿಭಟನೆಗೆ ಪ್ರತಿಯಾಗಿ ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಹಸಿರು ಪ್ರತಿಷ್ಠಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮತ್ತು ಅರೆ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಬುದ್ಧಿಜೀವಿಗಳು, ಚಿಂತಕರು, ಕನ್ನಡ, ದಲಿತ, ರೈತ, ಕಾರ್ಮಿಕ, ಯುವ ಸೇರಿ ವಿವಿಧ ಸಾಮಾಜಿಕ ಸಂಘಟನೆಗಳ ಸಹಸ್ರಾರು ಜನರು ಭಾಗವಹಿಸಿ, ೩೭೧ (ಜೆ) ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಸ್‌ವಿಪಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ, ಕಲಂ ವಿರೋಧಿಗಳಿಗೆ ಧಿಕ್ಕಾರ ಕೂಗಿದರು. ಅಲ್ಲದೆ ಕಲಂ ಸಮರ್ಪಕ ಅನುಷ್ಠಾನ ಮಾಡದ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಸಮಿತಿ ಅಧ್ಯಕ್ಷ ಲಕ್ಷ್ನಣ ದಸ್ತಿ ಮಾತನಾಡಿ, ಹಸಿರು ಪ್ರತಿಷ್ಠಾನದವರು ೩೭೧ ಕಲಂ ವಿರುದ್ಧ ಇಪ್ಪತ್ನಾಲ್ಕು ಜಿಲ್ಲೆಗಳ ಜನರಿಗೆ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಸಂವಿಧಾನ ಬದ್ಧ ಹಕ್ಕಿನ ಮೂಲ ಉದ್ಧೇಶ ಗಾಳಿಗೆ ತೂರಿ, ತಪ್ಪು ಸಂದೇಶ ನೀಡುತ್ತಿದ್ದಾರೆ. ಇದು ಸಾಂಕೇತಿಕ ಹೋರಾಟವಾಗಿದ್ದು, ಹೀಗೆ ಮುಂದುವರಿದರೆ ಪರಿಣಾಮ ನೆಟ್ಟಗೆ ಇರಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಮುಖರು: ಹೈಶಿ ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಕರ್ನಾಟಕ ಪೀಪಲ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಾಂತಪ್ಪ ಸೂರನ್, ಚಂದ್ರಶೇಖರ ಶೀಲವಂತ, ಅಲ್ ಖಮರ್ ಸಂಸ್ಥೆ ಅಧ್ಯಕ್ಷ ಅಸ್ಸಾದ್ ಅನ್ಸಾರಿ ಸೇರಿ ೨೨ ಶಾಲೆ, ಕಾಲೇಜುಗಳ ಪ್ರಮುಖರು, ವಿದ್ಯಾರ್ಥಿಗಳು ಭಾಗವಹಿಸಿ, ಪ್ರತಿಭಟನೆಗೆ ಬೆಂಬಲ ನೀಡಿದರು.
ಪ್ರಮುಖರಾದ ಪ್ರತಾಪಸಿಂಗ್ ತಿವಾರಿ, ಆರ್‌ಕೆ ಹುಡುಗಿ, ಬಸವರಾಜ ಕುಮ್ಮನೂರ, ಡಾ.ಗಲಶೆಟ್ಟಿ, ಡಾ.ಶರಣಪ್ಪ ಸೈದಾಪುರ, ಡಾ.ಸಂಗೀತಾ ಕಟ್ಟಿ, ಚಂದ್ರಶೇಖರ ಪಾಟೀಲ್ ಹುಚಕನಳ್ಳಿ, ಬಿ.ಬಿ.ನಾಯಕ, ಡಾ.ಗಾಂಧೀಜಿ ಮೋಳಕೇರಿ, ಡಾ.ಮಲ್ಲಿಕಾರ್ಜುನ ಶೆಟ್ಟಿ, ಡಾ.ಹರ್ಷವರ್ಧನ, ಲಿಂಗರಾಜ ಸಿರಗಾಪುರ,ಡಾ.ಆನಂದ ಸಿz್ದÁಮಣಿ, ಮುತ್ತಣ್ಣ ನಾಡಗೇರಿ, ಶರಣು ಐ.ಟಿ, ಮಂಜುನಾಥ ನಾಲವಾರಕರ್, ಸಚಿನ್ ಫರತಾಬಾದ್, ಗೋಪಾಲ ನಾಟಿಕರ್, ದತ್ತು, ಶಿವಲಿಂಗಪ್ಪ ಭಂಡಕ, ಮನೋಹರ ಬೀರನೋರ, ಎಂಬಿ ನಿಂಗಪ್ಪ, ರವಿ ದೇಗಾಂವ, ಆನಂದ ಕಪನೂರ, ಅಶೋಕ ಗುರೂಜಿ, ಭೀಮಶೆಟ್ಟಿ ಮುಕ್ಕಾ, ಬಾಬುರಾವ ಗಂವಾರ, ರಾಜು ಜೈನ, ಗಿರೀಶಗೌಡ ಇನಾಮದಾರ, ಭೀಮರಾಯ ಕಂದಳ್ಳಿ, ಸುರೇಶ ನಂದಗಾAವ, ಮಾಲಾ ಕಣ್ಣಿ, ಅಸ್ಲಂ ಚೌಂಗೆ, ಸಾಬಿರ್ ಅಲಿ, ಬಾಬಾ ಫಕ್ರುದ್ದೀನ್, ಜೈರಾಜ ಕಿಣಗೀಕರ, ಡಾ.ಚಿ.ಸಿ.ನಿಂಗಣ್ಣ ಇತರರಿದ್ದರು.
ಪ್ರಮುಖ ಬೇಡಿಕೆಗಳು…