ಕಲಬುರಗಿ: ಸಂವಿಧಾನದ ೩೭೧(ಜೆ) ವಿಧಿ ಜಾರಿಯಿಂದ ರಾಜ್ಯದ ಇತರ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಹೇಳಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಈ ಭಾಗದ ಅಸ್ಮಿತೆಗೆ ಧಕ್ಕೆ ತರುವ ಹುನ್ನಾರ ನಡೆದಿದ್ದು, ಅದಕ್ಕೆ ಪ್ರತಿಯಾಗಿ ಕಲಬುರಗಿಯಲ್ಲಿ ಜೂ.೧ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಪ್ರಮುಖರು ತಿಳಿಸಿದರು.
ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಲಕ್ಷö್ಮಣ ದಸ್ತಿ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಜಾರಿಯಾದ ೩೭೧(ಜೆ)ರಡಿ ಅಭಿವೃದ್ಧಿ ಮಂಡಳಿ ರಚನೆಯಾಗಿದೆ. ಕೆಲ ಪ್ರಗತಿಪರ ಕೆಲಸ ನಡೆದಿದ್ದರೂ ೩೭೧(ಜೆ) ಸಮರ್ಪಕ ಅನುಷ್ಠಾನವಾಗಿಲ್ಲ. ಇಂಥದರಲ್ಲಿ ಈ ಭಾಗಕ್ಕೆ ನೀಡಿದ ವಿಶೇಷ ಮೀಸಲು ವಿರೋಧಿಸುತ್ತಿರುವುದನ್ನು ಖಂಡಿಸಿದರು.
ಬೆAಗಳೂರಿನಲ್ಲಿ ಕೆಲ ಹಸಿರು ಪ್ರತಿಷ್ಠಾನ ಎಂಬ ಪಟ್ಟಭದ್ರ ಹಿತಾಸಕ್ತಿ ಗುಂಪುಗಳು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಜಾರಿ ನಂತರ ಇತರ ಜಿಲ್ಲೆಗಳ ಹುದ್ದೆಗಳನ್ನು ಕಬಳಿಸಲಾಗುತ್ತಿದೆ ಅಪಪ್ರಚಾರದೊಂದಿಗೆ ಬೆಂಗಳೂರಿನಲ್ಲಿ ಜೂ.೧ರಂದು ಪ್ರತಿಭಟನೆಗೆ ನಿರ್ಧರಿಸಿದ್ದು, ರಾಜ್ಯಪಾಲರು ಮತ್ತು ಸರ್ಕಾರ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಸತ್ಯಶೋಧನಾ ಸಮಿತಿ, ಧರ್ಮಸಿಂಗ್ ಸಮಿತಿ, ನಂಜುAಡಪ್ಪ ಸಮಿತಿ ವರದಿ ಪ್ರಕಾರ ಕಕ ಹಿಂದುಳಿದಿದೆ. ಉದ್ಯೋಗ, ಶೈಕ್ಷಣಿಕವಾಗಿ ತೀರಾ ಕೆಳಮಟ್ಟದಲ್ಲಿ ಇರುವುದರಿಂದ ಸಂವಿಧಾನದಲ್ಲಿ ಅವಕಾಶ ನೀಡಿದ್ದರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಬೆಂಗಳೂರಿನ ಪ್ರತಿಭಟನೆಗೆ ಪ್ರತಿರೋಧ ಮತ್ತು ೩೭೧(ಜೆ) ಸಮರ್ಪಕ ಜಾರಿಗೆ ಆಗ್ರಹಿಸಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜೂ.೧ರಂದು ಬೆಳಗ್ಗೆ ೧೦ಕ್ಕೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರಮುಖರಾದ ಶಾಂತಪ್ಪ ಸೂರನ್, ಡಾ.ಬಸವರಾಜ ಕುಮ್ನೂರ, ಆರ್.ಕೆ. ಹುಡಗಿ, ಮನೀಶ್ ಜಾಜು, ಡಾ.ಮಾಜಿದ್ ದಾಗಿ, ಲಿಂಗರಾಜ ಸಿರಗಾಪುರ, ಜ್ಞಾನಮಿತ್ರ ಸ್ಯಾಮುವೆಲ್, ಶಿವಲಿಂಗಪ್ಪ ಭಂಡಕ, ಅಸ್ಲಂ ಚೌಂಗೆ, ಅಬ್ದುಲ್ ರಹೀಮ್, ಅಬ್ದುಲ್ ಖದೀರ್ ಇತರರಿದ್ದರು.