ಜಿಲ್ಲೆ

21 ರೈತರಿಗೆ 37.8 ಎಕರೆ ಜಮೀನು ಮಂಜೂರು

ಲಾನುಭವಿಗಳಿಗೆ ಶಾಸಕ ಸುಬ್ಬಾರೆಡ್ಡಿ ಹಕ್ಕುಪತ್ರ ವಿತರಣೆ | ಬಾಕಿ 900 ಅರ್ಜಿಗಳೂ ಶೀಘ್ರ ಇತ್ಯರ್ಥ

ಗುಡಿಬಂಡೆ : ನಮೂನೆ 53ರಲ್ಲಿ ಉಳಿಕೆ ಇರುವ 900 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುವುದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ದರಖಾಸ್ತು ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಒಟ್ಟು 21 ರೈತರಿಗೆ 37.8 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ, ಮುಂದಿನ 15 ದಿನಗಳ ನಂತರ ಮತ್ತೆ ಸಭೆ ಕರೆದು ಉಳಿದ ಅರ್ಜಿಗಳನ್ನು ಪರಿಶೀಲಿಸಿ ಜಮೀನು ಮಂಜೂರು ಮಾಡಲಾಗುವುದು. ರೈತರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ವಿಶೇಷವಾಗಿ ನೂತನ ಯೋಜನೆ ಜಾರಿಗೆ ತಂದಿದ್ದು, ಜಮೀನು ಮಂಜೂರಾಗಿರುವ ರೈತರಿಗೆ ಅಧಿಕಾರಿಗಳೇ ಸರ್ವೇ ಕಾರ್ಯ ಮಾಡಿ, ಹಕ್ಕುಪತ್ರ ನೀಡಿ ನಂತರ ಖಾತೆ ಮಾಡಿ ಕೆಲವೇ ದಿನಗಳಲ್ಲಿ ಪಹಣಿಯನ್ನೂ ನೀಡುವ ಯೋಜನೆ ಇದಾಗಿದೆ. ಈ ಸಭೆಯಲ್ಲಿ ಅರಣ್ಯ ಇಲಾಖೆ ಎನ್‌ಒಸಿ ಪತ್ರ ಇಲ್ಲದೇ ಇರುವುದಿಂದ ತಡೆದಿದ್ದು, ರೈತರು ಅರಣ್ಯ ಇಲಾಖೆ ಎನ್‌ಒಸಿ ನೀಡಿದರೆ ಪರಿಶೀಲಿಸಿ ಜಮೀನು ಮಂಜೂರು ಮಾಡಲಾಗುವುದು. ಇಡೀ ಜಿಲ್ಲೆಯಲ್ಲಿ ಒಂದೇ ಬಾರಿ 21 ರೈತರಿಗೆ ಸಾಗುವಳಿ ಚೀಟಿ ಮಂಜೂರು ಮಾಡಿರುವುದು ಇದೇ ಮೊದಲು. ನಮೂನೆ -53ರಲ್ಲಿ 900 ಅರ್ಜಿಗಳು ಬಾಕಿ ಇದ್ದು, ಅವುಗಳನ್ನು ಸಹ ತ್ವರಿತವಾಗಿ ಇತ್ಯರ್ಥಪಡಿಸಿ ಭೂಮಿ ನೀಡಲಾಗುವುದು ಎಂದರು.

ತಜಸೀಲ್ದಾರ್ ಸಿಗ್ಬತ್‌ವುಲ್ಲಾ, ದರಖಾಸ್ತು ಸಮಿತಿ ಸದಸ್ಯರಾದ ಡಿ.ಎಲ್.ಪರಿಮಳ, ಚಂದ್ರಶೇಖರರೆಡ್ಡಿ, ನರಸಿಂಹಮೂರ್ತಿ ಸೇರಿ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.