ಓಬಳಾಪುರ ಗ್ರಾಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಶಂಕರಲಿಂಗೇಗೌಡ, ಎನ್. ಬಸವರಾಜ್, ರಂಗೇಗೌಡ, ಸ್ವಾಮಿ, ಇದ್ದರು. 
ಜಿಲ್ಲೆ

36 ಅಂಗನವಾಡಿ ಕೇಂದ್ರಗಳು ಮಂಜೂರು

ಬಾಗೂರ: ಚನ್ನರಾಯಪಟ್ಟಣ ತಾಲೂಕಿಗೆ 36 ಅಂಗನವಾಡಿ ಕೇಂದ್ರಗಳು ಮಂಜೂರಾಗಿವೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಓಬಳಾಪುರ ಗ್ರಾಮದಲ್ಲಿ ಶನಿವಾರ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ನೇಮಕ ಮಾಡಲಾಗುತ್ತದೆ. ಇದರಿಂದ ಮೂರು ವರ್ಷದಿಂದ ಆರು ವರ್ಷದ ಮಕ್ಕಳು ಹಾಗೂ ಗರ್ಭಿಣಿ ಬಾಣಂತಿಯರಿಗೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸಿಡಿಪಿಒ ಶಂಕರ್‌ಮೂರ್ತಿ ಎಸಿಡಿಪಿಒ ದಿನೇಶ್, ನಿವೃತ್ತ ಪ್ರಾಂಶುಪಾಲ ರಂಗೇಗೌಡ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್. ಬಸವರಾಜ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹನುಮೇಗೌಡ, ಮೇಲ್ವಿಚಾರಕರಾದ ಮಮತಾ, ನಾಗಮ್ಮ, ಮುಖಂಡರಾದ ಮಹಾಲಿಂಗೇಗೌಡ, ಸ್ವಾಮಿ, ದೊರೆ, ತಿಮ್ಮೇಗೌಡ, ಇತರರು ಹಾಜರಿದ್ದರು.