ಜಿಲ್ಲೆ

ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 36.29 ಲಕ್ಷ ರೂ.ಲಾಭ

ನಾಪೋಕ್ಲು: ನೆಲಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2023-24 ಸಾಲಿನಲ್ಲಿ 36.29 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಮಾಳೆಯಂಡ ಎಂ ಅಪ್ಪಚ್ಚ ತಿಳಿಸಿದರು.

ಸಂಘದಲ್ಲಿ 1192 ಸದಸ್ಯರಿದ್ದು, 1 ಕೋಟಿ 71 ಲಕ್ಷ ರೂ. ಷೇರು ಹಣ ಇದ್ದು, ಒಟ್ಟು 20 ಕೋಟಿ ರೂ. ದುಡಿಯುವ ಬಂಡವಾಳ ಇದೆ. 480 ರೈತರಿಗೆ 10.44 ಕೋಟಿ ರೂ. ಕೃಷಿ ಸಾಲ ವಿತರಿಸಿದ್ದು, ಜಾಮೀನು ಸಾಲ ಮತ್ತು ಗೊಬ್ಬರ ಸಾಲ 90 ಲಕ್ಷ ರೂ. ವಿತರಿಸಿದ್ದೇವೆ ಎಂದು ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಗುತ್ತದೆ. ಸೆ.22ರಂದು ಸಂಘದ ಸಭಾಂಗಣದಲ್ಲಿ ಮಹಾಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಚೀಯಕಪೂವಂಡ ವಿ ರೀನಾ, ನಿರ್ದೇಶಕ ಬದ್ದಂಜೆಟ್ಟಿರ ಎ ತಿಮ್ಮಯ್ಯ, ಎ.ಜಿ.ಟಿಂಶ, ಚೀಯಕಪೂವಂಡ ಡಿ ನಾಚಪ್ಪ, ಕರವಂಡ ಜಿ ಅಪ್ಪಣ್ಣ, ಮಚ್ಚುರ ಎಂ ರವೀಂದ್ರ, ಮಣವಟ್ಟೀರ ಬಿ ದೀಪಕ್ ಪೊನ್ನಪ್ಪ, ಮಣವಟ್ಟೀರ ಕೆ ದಯಾ ಚಿಣ್ಣಪ್ಪ, ಚೀಯಕಪೂವಂಡ ಎ ಸುನೀಲ್, ಅಪ್ಪುಮಣಿಯಂಡ ಬಿ ಕಾವೇರಮ್ಮ, ಪಿ.ಎಂ. ವಿಜು, ಕಾರ್ಯನಿರ್ವಹಣಾಧಿಕಾರಿ ಅನಿಲ್‌ಕುಮಾರ್, ಎಂ.ಬಿ. ಅಯ್ಯಪ್ಪ ಇತರರು ಇದ್ದರು.