ಜಿಲ್ಲೆ

ಉತ್ತರ ಕನ್ನಡ ಜಿಲ್ಲೆಗೆ 36.06 ಕೋಟಿ ರೂ. ಬರ ಪರಿಹಾರ

Uttara Kannada - Subash Hegde

ಕಾರವಾರ: ಜಿಲ್ಲೆಯ 11 ತಾಲೂಕುಗಳ 78,323 ರೈತರ ಬ್ಯಾಂಕ್ ಖಾತೆಗಳಿಗೆ ಬರ ಪರಿಹಾರ ಒಟ್ಟು 36.06 ಕೋಟಿ ರೂ. ಡಿಬಿಟಿ ಮೂಲಕ ಜಮಾ ಆಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾರವಾರದಲ್ಲಿ 1,178 ರೈತರ ಬ್ಯಾಂಕ್ ಖಾತೆಗಳಿಗೆ 29.97 ಲಕ್ಷ ರೂ., ಜೊಯಿಡಾದ 2,948 ರೈತರಿಗೆ 1.30 ಕೋಟಿ ರೂ., ಹಳಿಯಾಳದ 15,122 ರೈತರಿಗೆ 14.62 ಕೋಟಿ, ಯಲ್ಲಾಪುರದ 3,896 ರೈತರಿಗೆ 1.79 ಕೋಟಿ ರೂ. ಮುಂಡಗೋಡನ 7,734 ರೈತರಿಗೆ 5.55 ಕೋಟಿ ರೂ., ಶಿರಸಿಯ 9,802 ರೈತರಿಗೆ 4.53 ಕೋಟಿ ರೂ., ಅಂಕೋಲದ 10,942 ರೈತರಿಗೆ 2.05 ಕೋಟಿ ರೂ., ಕುಮಟಾದ 8,791 ರೈತರಿಗೆ 1.31 ಕೋಟಿ ರೂ., ಸಿದ್ದಾಪುರದ 10,819ರೈತರಿಗೆ 3.11 ಕೋಟಿ ರೂ. ಭಟ್ಕಳದ 6,451 ರೈತರಿಗೆ 88.84 ಲಕ್ಷರು. ದಾಂಡೇಲಿಯ 640 ರೈತರ ಬ್ಯಾಂಕ್ ಖಾತೆಗಳಿಗೆ 58.88 ಲಕ್ಷ ರೂ ಹಣ ಜಮಾ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
4 ಸಾವಿರಕ್ಕೂ ಅಧಿಕ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ ಸಮಸ್ಯೆ, 1200 ಕ್ಕೂ ಅಧಿಕ ಪ್ರಕರಣಗಳಲ್ಲಿ ಪ್ರೂಟ್ಸ್ ಮತ್ತು ಆಧಾರ್‌ನಲ್ಲಿ ಹೆಸರು ಹೊಂದಾಣಿಕೆ ಆಗದೇ ಇರುವುದು, ಅಲ್ಲದೆ, ಬ್ಯಾಂಕ್ ಖಾತೆಯಲ್ಲಿನ ನ್ಯೂನ್ಯತೆ, ಖಾತೆ ಬಂದ್ ಆಗಿರುವುದು ಸೇರಿದಂತೆ ವಿವಿಧ ತಾಂತ್ರಿಕ ಕಾರಣಗಳಿಂದ ಜಿಲ್ಲೆಯ ಒಟ್ಟು 5,774 ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಮೊತವು ಇದುವರೆಗೆ ಜಮಾ ಆಗಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಎಲ್ಲ ತಾಲೂಕುಗಳ ತಹಸೀಲ್ದಾರ್ ಕಚೇರಿಗಳಲ್ಲಿ ರೈತ ಸಲಹಾ ಕೇಂದ್ರ ತೆರೆಯಲಾಗಿದೆ. ರೈತರು ಸಂಪರ್ಕಿಸಿ ಅವುಗಳನ್ನು ಸರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ತಿಳಿಸಿದ್ದಾರೆ.