ಜಿಲ್ಲೆ

ವಿಜೃಂಭಣೆಯ ಗುರುರಾಯರ ಬೆಳ್ಳಿ ರಥೋತ್ಸವ

ಹೊನ್ನಾಳಿ: ಪಟ್ಟಣದ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಅಂಗವಾಗಿ ಗುರುರಾಘವೇಂದ್ರರ ಬೆಳ್ಳಿ ರಥೋತ್ಸವ ಸಹಸ್ರಾರು ಭಕ್ತರ ನಡುವೆ ಗುರುವಾರ ಅದ್ಧೂರಿಯಾಗಿ ನಡೆಯಿತು.

ಕಳೆದ ಮೂರು ದಿನಗಳಿಂದ ಗುರುರಾಯರ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವದಲ್ಲಿ ಗುರುರಾಯರಿಗೆ ಆನೆ ಚಾಮರ ಬೀಸಿದರೆ, ಗೋವು ಮೆರವಣಿಗೆಯಲ್ಲಿ ಪಾಲ್ಗೊಂಡ್ಡಿದ್ದು ವಿಶೇಷವಾಗಿತ್ತು.

ಶ್ರೀಮಠದಲ್ಲಿ ಶುಕ್ರವಾರ ಪವಮಾನ ಹೋಮ ಹಾಗೂ ಅಭಿನಂದನಾ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ವಾಧಿರಾಜ್ ಕಮರೂರು ತಿಳಿಸಿದರು.

ರಾಘವೇಂದ್ರ ಸೇವಾ ಟ್ರಸ್ಟ್‌ನ ಅಧ್ಯಕ್ಷ ಎಚ್.ಎಂ. ಶ್ರೀನಿವಾಸ್‌ಮೂರ್ತಿ, ಉಪಾಧ್ಯಕ್ಷ ಕೆ.ಆರ್. ಶ್ರೀನಿವಾಸ್, ನಿರ್ದೇಶಕರಾದ ಎನ್. ಜಯರಾವ್, ಸಿ. ಸತ್ಯನಾರಾಯಣ್ ರಾವ್, ಎಚ್.ಎನ್. ಗುರುದತ್ತ, ಎಂ.ವಿ. ಬದರಿನಾರಾಯಣ್, ಬಿ. ರಾಘವೇಂದ್ರಚಾರ್, ಎಸ್.ಎನ್. ಪ್ರಕಾಶ್ ಇದ್ದರು.