ಗಂಗಾವತಿ ತಾಲೂಕಿನ ರಾಂಪುರದ ಗಜಾನನ ಯುವಕ ಸಂಘದ ಮೈದಾನದಲ್ಲಿ ಅಯುಷ್ ಇಲಾಖೆಯಿಂದ ಹಮ್ಮಿಕೊಂಡ ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ಮಲ್ಲಾಪುರ ಆಯುಷ್ ಕೇಂದ್ರದ ಮುಖ್ಯಸ್ಥ ಡಾ.ರಾಜಶೇಖರ್ ನಾರಿನಾಳ್ ಶನಿವಾರ ಮಾತನಾಡಿದರು. ಆಯುಷ್ ಇಲಾಖೆ ವೈದ್ಯಾಧಿಕಾರಿ ಗುರುರಾಜ್ ಉಮಚಗಿ, ಮುಖಂಡರಾದ ವೆಂಕಟೇಶ, ಭಾಸ್ಕರರಾವ್ ಇತರರಿದ್ದರು. 
ಜಿಲ್ಲೆ

350ಕ್ಕೂ ಹೆಚ್ಚು ರೋಗಿಗಳ ತಪಾಸಣೆ

Kopala - Desk - Eraveni

ಗಂಗಾವತಿ: ತಾಲೂಕಿನ ರಾಂಪುರದ ಗಜಾನನ ಯುವಕ ಸಂಘದ ಮೈದಾನದಲ್ಲಿ ಆಯುರ್ವೇದ ದಿನಾಚರಣೆ ನಿಮಿತ್ತ ಆಯುಷ್ ಇಲಾಖೆಯಿಂದ ಆರೋಗ್ಯ ತಪಾಸಣೆ ಶಿಬಿರ ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಮಲ್ಲಾಪುರ ಗ್ರಾಪಂ, ಆಯುರ್ವೇದ ಚಿಕಿತ್ಸಾಲಯ ಮತ್ತು ಆಯುಷ್ ೆಡರೇಶನ್ ಆ್ ಇಂಡಿಯಾ ಸಹಯೋಗದೊಂದಿಗೆ ಹಮ್ಮಿಕೊಂಡ ಶಿಬಿರದಲ್ಲಿ 350ಕ್ಕೂ ಹೆಚ್ಚು ರೋಗಿಗಳನ್ನು ತಪಾಸಿಸಿ, ಆಯುರ್ವೇದ ಚಿಕಿತ್ಸೆ ಸಲಹೆ ನೀಡಲಾಯಿತು. 65 ಜನ ರೋಗಿಗಳಿಗೆ ಸಂಧಿವಾತಕ್ಕಾಗಿ ಅಭ್ಯಂಗ ಮತ್ತು ನಾಡಿ ಸ್ವೇಧ ಪಂಚಕರ್ಮ ಚಿಕಿತ್ಸೆ ಉಚಿತವಾಗಿ ನೀಡಲಾಯಿತು.

ಮಲ್ಲಾಪುರ ಆಯುರ್ವೇದಿಕ್ ಚಿಕಿತ್ಸಾಲಯದ ವೈದ್ಯಾಧಿಕಾರಿ ರಾಜಶೇಖರ್ ನಾರಿನಾಳ್ ಮಾತನಾಡಿ, ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿಯಾಗಿದ್ದು, ಯಾವುದೇ ಅಡ್ಡ ಪರಿಣಾಮಗಳಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ವ್ಯವಸ್ಥೆಯಿದೆ ಎಂದರು.

ಗ್ರಾಪಂ ಸದಸ್ಯ ಕಾಶೀರಾವ್, ಪಿಡಿಒ ಕೃಷ್ಣಾ, ಆಯುಷ್ ಇಲಾಖೆ ವೈದ್ಯಾಧಿಕಾರಿಗಳಾದ ಗುರುರಾಜ್ ಉಮಚಗಿ, ಎಚ್.ಎ್.ಕವಿತಾ, ಭಾನುಪ್ರಕಾಶ, ವೀಣಾ, ಜಯಶ್ರೀ, ೆಡರೇಶನ್ ಜಿಲ್ಲಾಧ್ಯಕ್ಷ ಡಾ.ಎಸ್.ವಿ.ಮಗದಾಳ್, ಡಾ.ವಿಜಯ್ ಗೌಡರ್, ಪದಾಧಿಕಾರಿಗಳಾದ ಡಾ.ಮಹಾಲಿಂಗಪ್ಪ ಕಾಳಗಿ, ಡಾ.ತ್ರಿವೇಣಿ ಗೌಡರ್, ಡಾ.ಶ್ರೇಯಾ, ಪ್ರಮುಖರಾದ ವೆಂಕಟೇಶ, ಭಾಸ್ಕರ್‌ರಾವ್ ಇತರರಿದ್ದರು.