ಜಿಲ್ಲೆ

350 ಲೀಟರ್​ ಸ್ಪಿರಿಟ್​ ವಶಕ್ಕೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಕ್ರಮ ಸ್ಪಿರಿಟ್​ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು 350 ಲೀ. ಸ್ಪಿರಿಟ್​ ವಶ ಪಡಿಸಿಕೊಂಡ ಟನೆ ನಗರದ ಕೆಲಗೇರಿ ಬ್ರಿಜ್​ ಬಳಿ ಬುಧವಾರ ನಡೆದಿದೆ.
ಕಾರಿನಲ್ಲಿ ಸ್ಪಿರಿಟ್​ ಸಾಗಿಸುತ್ತಿರುವ ವಿಷಯ ತಿಳಿದ ಕಾರ್ಯಾಚರಣೆಗೆ ಇಳಿದ ಪೊಲೀಸರು, ಕೆಲಗೇರಿ ಬ್ರಿಜ್​ ಬಳಿ ಕಾರು ಪರಿಶೀಲಿಸಿದಾಗ ಸ್ಪಿರಿಟ್​ ಪತ್ತೆಯಾಗಿದೆ. ಕಾರಿನಲ್ಲಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಕಾರು, ಕಾರಿನಲ್ಲಿದ್ದ 2,50,000 ರೂ. ಮೌಲ್ಯದ 350 ಲೀಟರ್​ ಸ್ಪಿರಿಟ್​ ಸೇರಿ ಒಟ್ಟು 6,60,000 ರೂ. ಮೌಲ್ಯದ ವಸ್ತಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಶೋಧಕ್ಕೆ ಬಲೆ ಬೀಸಿದ್ದಾರೆ. ಸಿಸಿಬಿ ವಿಭಾಗದ ಎಸಿಪಿ ಎಸ್​.ಟಿ.ಒಡೆಯರ ನೇತೃತ್ವದಲ್ಲಿ ಸಿಸಿಬಿ ಪೊಲೀಸ್​ ಇನ್ಸಪೆಕ್ಟರ್​ ಸಿದ್ದಪ್ಪ ಸಿಮಾನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.