ಜಿಲ್ಲೆ

33.5 ಕಿಲೋ ಗಾಂಜಾ ವಶ, ಓರ್ವ ಬಂಧನ

ಸೌಮ್ಯ ಆರ್

ಕಾಸರಗೋಡು: ಉಪ್ಪಳ ಸೋಂಕಾಲಿನ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು 33.5 ಕಿಲೋ ಗಾಂಜಾ ವಶಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಕುಕ್ಕಾರ್ ನಿವಾಸಿ ಹಮೀದ್ ಯಾನೆ ಟಿಪ್ಪರ್ ಹಮೀದ್ ಎಂಬಾತನನ್ನು ಬಂಧಿಸಲಾಗಿದೆ. ಜೂನ್ 1ರಂದು ಉಪ್ಪಳ ಸೋಂಕಾಲ್ ನಿವಾಸಿ ಅಶೋಕ್ ಎಂಬುವರ ಮನೆಗೆ ದಾಳಿ ವೇಳೆ ಗಾಂಜಾ ಪತ್ತೆಯಾಗಿತ್ತು. ಅಶೋಕನನ್ನು ವಿಚಾರಣೆಗೆ ಒಳಪಡಿಸಿದಾಗ ಹಮೀದ್ ಕೂಡ ಪ್ರಕರಣದಲ್ಲಿ ಶಾಮೀಲಾಗಿರುವುದಾಗಿ ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.