ಶ್ರೀ ಬಸಯ್ಯ ಅಜ್ಜನವರು 
ಜಿಲ್ಲೆ

ನಾಳೆಯಿಂದ ಬಸಯ್ಯ ಅಜ್ಜನವರ 32ನೇ ಪುಣ್ಯಸ್ಮರಣೆ

ಗಿರೀಶ ಸಗರ

ಮುಧೋಳ: ತಾಲೂಕಿನ ಪುಣ್ಯಕ್ಷೇತ್ರ ಉತ್ತೂರದ ಆರಾಧ್ಯದೈವ ಕಾಯಕಯೋಗಿ ಸಿದ್ಧ್ದಿಪುರುಷ ಶ್ರೀ ಬಸಯ್ಯ ಅಜ್ಜನವರ 32ನೇ ಪುಣ್ಯಸ್ಮರಣೆ ಸೆ. 16 ರಿಂದ 17 ರವರೆಗೆ ನಡೆಯಲಿದೆ.

ಮುಧೋಳ ವಿರಕ್ತಮಠ-ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳು, ಕೊಣ್ಣೂರ ಕಲ್ಯಾಣ ಹೊರಗಿನಮಠದ ಶ್ರೀ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಉತ್ತೂರ ಹಿರೇಮಠದ ನೂರಂದಯ್ಯ ಸ್ವಾಮಿಗಳು, ಮುರುೇಂದ್ರ ಸ್ವಾಮಿಗಳು, ಶಾಂತವೀರ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.

ಸೆ. 16 ರಂದು ಬಸಯ್ಯ ಅಜ್ಜನವರ ಕರ್ತೃ ಗದ್ದುಗೆಗೆ ಬುತ್ತಿಪೂಜೆ, ರಾತ್ರಿ 10 ಗಂಟೆಗೆ ಶಿವಭಜನೆ ನಡೆಯಲಿದೆ. ಸೆ.17ರಂದು ಬೆಳಗ್ಗೆ 9 ಗಂಟೆಗೆ ಘಟಪ್ರಭಾ ನದಿ ದಡದಲ್ಲಿ ಗಂಗಾಪೂಜೆ, ಬೆಳಗ್ಗೆ 10 ಗಂಟೆಗೆ ಮಹಾರುದ್ರಾಭಿಷೇಕ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ನಡೆಯಲಿದೆ ಎಂದು ಉತ್ತೂರ ಸರ್ವ ಸದ್ಭಕ್ತ ಮಂಡಳಿ ಹಾಗೂ ಶಿವಶರಣ ಮಂಟಪ ಟ್ರಸ್ಟ್ ಕಮಿಟಿ ತಿಳಿಸಿದೆ.