ಚಿತ್ರದುರ್ಗ: ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಸಕ್ತ ಮಾ. 4ರಿಂದ ಜೂ. 26ರವರೆಗೆ 32 ದೌರ್ಜನ್ಯ ಪ್ರಕರಣ ದಾಖಲಾಗಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ತಿಳಿಸಿದ್ದಾರೆ.
ಕಾಯ್ದೆಯಡಿ ಪರಿಶಿಷ್ಟ ಜಾತಿಯ 25, ಪರಿಶಿಷ್ಟ ವರ್ಗದ 7 ದೌರ್ಜನ್ಯ ಪ್ರಕರಣ ಕಂಡು ಬಂದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿವೆ ಎಂದು ಗುರುವಾರ ಮಾಹಿತಿ ನೀಡಿದ್ದಾರೆ.
ಪುರುಷ, ಸ್ತ್ರೀ ಕ್ರಮವಾಗಿ ಎಸ್ಸಿ 21, 22, ಎಸ್ಟಿ ತಲಾ 6 ಸೇರಿ ಒಟ್ಟು 55 ಸಂತ್ರಸ್ತರಿಗೆ ಪರಿಹಾರಧನವನ್ನು ಆರ್‌ಟಿಜಿಎಸ್ ಮೂಲಕ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.