ಸಾಂದರ್ಭಿಕ ಚಿತ್ರ  
ಜಿಲ್ಲೆ

ಮೈಸೂರಿನಲ್ಲಿ ಒಂದೇ ದಿನ 32 ಪಿಎಸ್​ಐಗಳ ವರ್ಗಾವಣೆ; ನಿಮ್ಮ ಪ್ರದೇಶಕ್ಕೆ ಯಾರು?: ಇಲ್ಲಿದೆ ಪೂರ್ತಿ ಪಟ್ಟಿ

Webdesk - Manjunatha B

ಮೈಸೂರು: ರಾಜ್ಯ ಗೃಹ ಇಲಾಖೆಯಲ್ಲಿ ಕಳೆದ ಕೆಲವು ದಿನಗಳಿಂದ ಮಹತ್ವದ ಬೆಳವಣಿಗೆಗಳು ಆಗಲಾರಂಭಿಸಿದ್ದು, ಇದೀಗ ಇನ್ನೊಂದು ಹಂತದ ದಂಡಿ ವರ್ಗಾವಣೆ ಮಾಡಲಾಗಿದೆ.

ಇತ್ತಿಚಿನ ದಿನಗಳಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದ್ದು, ಇವತ್ತೊಂದೇ ದಿನ ಮೈಸೂರು ದಕ್ಷಿಣ ವಲಯದ 32 ಪೊಲೀಸ್ ಸಬ್​ಇನ್ಸ್​ಪೆಕ್ಟರ್(ಸಿವಿಲ್​​​)​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದೂ ಸೂಚಿಸಲಾಗಿದ್ದು, ಈ ಕೆಳಗಿನ‌ ಪಟ್ಟಿಯಲ್ಲಿ ವರ್ಗಾವಣೆ ಆಗಿರುವ ಪೊಲೀಸ್ ಸಬ್​ಇನ್ಸ್​ಪೆಕ್ಟರ್(ಸಿವಿಲ್​​​)​ ಮತ್ತು ಅವರ ಹೊಸ ಕಾರ್ಯಸ್ಥಾನಗಳನ್ನು ನಮೂದಿಸಲಾಗಿದೆ.