ಕಾರವಾರ: ವೀರ ಬಹಾದ್ದೂರ್ ಹೆಂಜಾ ನಾಯ್ಕ ಹೆಸರಲ್ಲಿ ಕಾರವಾರದಲ್ಲಿ ಪ್ರಾರಂಭಿಸಲಾದ ಸೇನಾ ತರಬೇತಿ ಶಾಲೆ ಹಿಂದುಳಿದ ವರ್ಗದ ಯುವಕರಿಗೆ ವರದಾನವಾಗಿದೆ. ಮೂರು ವರ್ಷಗಳಲ್ಲಿ ರಾಜ್ಯದ 32 ಮಂದಿ ಅಗ್ನಿವೀರರಾಗಿ ಹೊರ ಹೊಮ್ಮಿದ್ದು, ಅಗ್ನಿಪಥ ಶಿಬಿರದಲ್ಲಿ ಭಾಗವಹಿಸಿದ ಇನ್ನೂ ಹಲವರ ರಿಸಲ್ಟ್ ಬರಬೇಕಾಗಿದೆ. ಕೇಂದ್ರ ಸರ್ಕಾರ 2022 ರಲ್ಲಿ ಸೇನೆಗೆಗಳಿಗೆ ಅಗ್ನಿವೀರ ಯೋಜನೆ ಘೋಷಿಸಿತ್ತು. ಅದೇ ವರ್ಷ ನವೆಂಬರ್‌ನಲ್ಲಿ ಆಗ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಜಿಲ್ಲೆಗೆ ಸೇನೆ ಆಯ್ಕೆ ಪೂರ್ವ ತರಬೇತಿ ಶಾಲೆ ಮಂಜೂರು ಮಾಡಿದ್ದರು. ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಅವರು ಆಗಿನ ಶಾಸಕಿ ರೂಪಾಲಿ ನಾಯ್ಕ ಅವರ ಜತೆ ಚರ್ಚಿಸಿ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ಪ್ರಾರಂಭಿಸಿದ್ದರು. ಪ್ರತಿ ಬ್ಯಾಚ್‌ಗೆ 18 ರಿಂದ 21 ವರ್ಷದ ರಾಜ್ಯದ ವಿವಿಧೆಡೆಯಿಂದ ಹಿಂದುಳಿದ ವರ್ಗದ 100 ಆಯ್ಕೆ ಮಾಡಲಾಗುತ್ತದೆ. ತರಬೇತಿ ಉಚಿತವಾಗಿದ್ದು, ಊಟ, ವಸತಿ ವ್ಯವಸ್ಥೆಯೂ ಇದೆ. ಅವರಿಗೆ ದೈಹಿಕ ಸಾಮರ್ಥ್ಯ ವೃದ್ಧಿಸಲು ಪ್ರತಿನಿತ್ಯ ವ್ಯಾಯಾಮ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಕೌಶಲಗಳನ್ನು ಹೇಳಿ ಕೊಡಲಾಗುತ್ತದೆ. ನಿವೃತ್ತ ಸೇನಾ ಅಽಕಾರಿಗಳು ತರಬೇತಿ ನೀಡುತ್ತಿದ್ದಾರೆ. ಇದುವರೆಗೆ 5 ಬ್ಯಾಚ್‌ಗಳಲ್ಲಿ 427 ರಷ್ಟು ಅಭ್ಯರ್ಥಿಗಳು ತರಬೇತಿ ಪಡೆದಿದ್ದಾರೆ. ಇದುವರೆಗೆ ಉತ್ತರ ಕನ್ನಡ ಜಿಲ್ಲೆಯ ಸುಮಾರು 8 ಹಾಗೂ ಉತ್ತರ ಕರ್ನಾಟಕ ಭಾಗದ ವಿಜಯಪುರ, ಹಾವೇರಿ ಸೇರಿ ವಿವಿಧ ಜಿಲ್ಲೆಗಳ 24ಕ್ಕೂ ಅಽಕ ಜನ ಭಾರತೀಯ ಸೇನೆಯ ಅಗ್ನಿವೀರರಾಗಿ ಆಯ್ಕೆಯಾಗಿದ್ದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಅಽಕಾರಿಗಳು ಮಾಹಿತಿ ನೀಡಿದ್ದಾರೆ. ಹೆಂಜಾ ನಾಯ್ಕ ಹೆಸರು ಸೋದೆ ಅರಸರ ಕಾಲದಲ್ಲಿ ಬ್ರಿಟಿಷರ ವಿರುದ್ಧ, ಟಿಪು÷್ಪ ವಿರುದ್ಧ ಹೋರಾಡಿದ ಸೇನಾಪತಿ ಹೆಂಜಾ ನಾಯ್ಕ. ಕಾರವಾರ ಮೂಲದವರಾದ ಅವರ ಶೂರತ್ವ, ಯುದ್ಧ ಕೌಶಲ ಇಂದಿಗೂ ಜನರ ಬಾಯಲ್ಲಿದೆ. ಅವರ ನೆನಪಿಗಾಗಿ ಕಾರವಾರದಲ್ಲಿ ಪುತ್ಥಳಿ ಸ್ಥಾಪಿಸಲಾಗಿದೆ. ಈಗ ತರಬೇತಿ ಶಾಲೆ ಅವರ ಹೆಸರನ್ನು ಅಜರಾಮರವಾಗಿಸಿದೆ. ಬೇಕಿದೆ ಸ್ವಂತ ಜಾಗ ಮೈದಾನ ಈ ಹಿಂದೆ ಯುವಕರಿಗೆ ತರಬೇತಿಗೆ ಮೈದಾನವೇ ಇರಲಿಲ್ಲ. ಬಸ್‌ನಲ್ಲಿ ಕಾರವಾರಕ್ಕೆ ಬಂದು ಹೋಗುತ್ತಿದ್ದರು. ನಂತರ ಶಾಸಕ ಸತೀಶ ಸೈಲ್ ಅವರು ತಮ್ಮ ಗಿರಿಜಾಬಾಯಿ ಸೈಲ್ ಕಾಲೇಜ್ ಆವರಣದಲ್ಲಿ ದೈಹಿಕ ವ್ಯಾಯಾಮ ನಡೆಸಲು ಅವಕಾಶ ನೀಡಿದ್ದಾರೆ. ಆದರೆ, ಶಾಲೆಗೆ ಕಾಯಂ ಮೈದಾನ ಹಾಗೂ ಒಂದು ಕಟ್ಟಡದ ಅವಶ್ಯಕತೆ ಇದೆ. ಜಿಲ್ಲೆಯ ಹೆಚ್ಚಿನ ಯುವಕರಿಗೆ ಇದರಲ್ಲಿ ಅವಕಾಶ ಕಲ್ಪಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಇದುವರೆಗೆ 400 ಕ್ಕೂ ಅಽಕ ಜನರಿಗೆ ಸೇನಾ ಆಯ್ಕೆ ಪೂರ್ವ ತರಬೇತಿ ನೀಡಲಾಗಿದೆ. ಈ ಬ್ಯಾಚ್ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಮೇ ನಿಂತ ತರಬೇತಿ ಆರಂಭಿಸಲಾಗುವುದು. ಜಿ.ಸತೀಶ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ