ಬೇಲೂರು : ಪಟ್ಟಣದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಶ್ರೀ ರಂಭಾಪುರಿ ಜಗದ್ಗುರುಗಳರ 31ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಮಾನವ ಹಾಗೂ ಸಭಾ ಮಂಟಪ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದೆ ಎಂದು ದಸರಾ ಧರ್ಂ ಸಮ್ಮೇಳನದ ಸೇವಾ ಸಮಿತಿ ಕೋಷಾಧ್ಯಕ್ಷ ನಟರಾಜ್ ಐಸ್ವಾಮಿಗೌಡ ಹೇಳಿದರು.
ಪಟ್ಟಣದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಾನವ ಮಂಟಪ ಮತ್ತು ಸಭಾ ಮಂಟಪ ನಿರ್ಮಾಣದ ಕೆಲಸ ವೀಕ್ಷಿಸಿ ಮಾತನಾಡಿದ ಅವರು, ಸೆ.26 ರಿಂದ ಅ.05 ವರೆಗೆ 10 ದಿನಗಳ ಕಾಲ ನಡೆಯಲಿರುವ ರಂಭಾಪುರಿ ಜಗದ್ಗುರುಗಳರ 31ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ವಿರೋಧ ಪಕ್ಷದ ಮುಖಂಡರು ಹಾಗೂ ನಾಡಿನಾಧ್ಯಂತ ಲಕ್ಷಾಂತರ ಭಕ್ತರು, ಸಾರ್ವಜನಿಕರು ಭಾಗವಹಿಸುತಿದ್ದು, ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಾಹಿತ್ಯ ಕವಿ ಗೋಷ್ಟಿ ಸೇರಿದಂತೆ ಇತರೆ ಕಾರ್ಯಕ್ರಮಗಳು ಜರುಗಲಿದೆ. ಇದಕ್ಕಾಗಿ ಬೇಲೂರು ಪಟ್ಟಣದಲ್ಲಿ ಬೃಹತ್ ಮಾನವ ಮಂಟಪದ ವೇದಿಕೆ, ಭಕ್ತರು ಕುಳಿತು ಕೊಳ್ಳಲು ಸಭಾ ಮಂಟಪ ನಿರ್ಮಿಸಲಾಗುತ್ತಿರುವ ಕೆಲಸ ಬರದಿಂದ ಸಾಗುತ್ತಿದೆ. ಇದರ ಜತೆಗೆ ದಾಸೋಹ ತಯಾರಿಸಲು ಸಹ ಬೃಹತ್ ಮಂಟಪ ನಿರ್ಮಿಸಲಾಗುತ್ತಿದೆ ಎಂದರು.