ಜಿಲ್ಲೆ

316 ಪಶು ವೈದ್ಯಕಿಯ ಸಂಸ್ಥೆಗಳು

ಕಲಬುರಗಿ: ಯಾದಗಿರಿಯಲ್ಲಿ 99 ಮತ್ತು ಕಲಬುರಗಿಯಲ್ಲಿ 217 ಸೇರಿ ಒಟ್ಟು 316 ಪಶು ವೈದ್ಯಕಿಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಕಲಬುರಗಿಯಲ್ಲಿ 832 ಮತ್ತು ಯಾದಗಿಒರಿಯಲ್ಲಿ 378 ಹುದ್ದೆಗಳು ಮಂಜೂರಾಗಿವೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ ತಿಳಿಸಿದ್ದಾರೆ. ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​ ಅಧಿವೇಶನದಲ್ಲಿ ಕೇಳಿದ ಪ್ರಶ್ನಿಸಿದ ಉತ್ತರಿಸಿದ್ದು, ಕಲಬುರಗಿಯಲ್ಲಿ 27, ಯಾದಗಿರಿಯಲ್ಲಿ 11 ನೂತನ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಕೋರಿ ಪ್ರಸ್ತಾವನೆ ಸ್ವೀಕೃತವಾಗಿವೆ. 2025&26ನೇ ಸಾಲಿನಲ್ಲಿ 50 ನೂತನ ಪಶುಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಘೋಷಿಸಲಾಗಿದೆ. ಕಾಲುಬಾಯಿ ಜ್ವರದ ಬಗ್ಗೆ ಜಾಗೃತಿ ಮೂಡಿಸಲಾಗಿದೆ. 2019&20ನೇ ಸಾಲಿನಿಂದ ಇದುವರೆಗೆ ಎನ್​ಎಡಿಸಿಪಿ ಯೋಜನೆ ಅಡಿ ಆರು ಸುತ್ತುಗಳಲ್ಲಿ 5.94 ಲ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋದಕ ಲಸಿಕೆ ಹಾಕಲಾಗಿರುತ್ತದೆ ಎಂದು ತಿಳಿಸಿದ್ದಾರೆ.