ಬಂಗಾರಪೇಟೆ: ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಗೆ ಅ.12ರಂದು ಚುನಾವಣೆ ನಿಗದಿಯಾಗಿದ್ದು, ಶನಿವಾರ ಮತ್ತು ಭಾನುವಾರ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಶನಿವಾರ ಮತ್ತು ಕೊನೇ ದಿನವಾದ ಭಾನುವಾರ 31 ಆಕಾಂಗಳು ನಾಮಪತ್ರ ಸಲ್ಲಿಸಿದರು.
12 ಸ್ಥಾನಗಳ ಪೈಕಿ ಎ&ವರ್ಗದ 4 ಸ್ಥಾನಗಳಿಗೆ 5 ಆಕಾಂಗಳು(ಒಬ್ಬರು 2ಸೆಟ್) ಮತ್ತು ಬಿ&ವರ್ಗದ 8 ಸ್ಥಾನಗಳಿಗೆ 25 ಆಕಾಂಗಳು ನಾಮಪತ್ರ ಸಲ್ಲಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮತ್ತು ಮುಖಂಡ ಕೆ.ಚಂದ್ರಾರೆಡ್ಡಿ ಸಮ್ಮುಖದಲ್ಲಿ ಎಲ್ಲ ಸ್ಥಾನಗಳಿಗೂ ಉಮೇದುವಾರಿಕೆ ಸಲ್ಲಿಸುವ ಮೂಲಕ ಗಮನ ಸೆಳೆದರು.
ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಹಾಗೂ ಮಾಜಿ ಜಿಪಂ ಸದಸ್ಯ ಮಹೇಶ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.
ಮುಖಂಡರಾದ ಕಾಮಸಮುದ್ರಂ ತಿಪ್ಪಾರೆಡ್ಡಿ, ಹುನುಕುಂದ ವೆಂಕಟೇಶ್,ಸಹಕಾರ ಯೂನಿಯನ್ ನಿರ್ದೇಶಕ ಮಂಜುನಾಥ್, ಹನುಮಂತು, ಹುಣಸಿನಹಳ್ಳಿ ಮುನಿಸ್ವಾಮಿ, ಕದಿರೇನಹಳ್ಳಿ ಚನ್ನಕೇಶವ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಂಗಾಚಾರಿ ಅ.ನಾ.ಹರೀಶ್, ಬೂದಿಕೋಟೆ ಆನಂದ್ ಇದ್ದರು.