ಚಿತ್ರದುರ್ಗ: ರಾಜ್ಯಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದು,ಈ ಸ ಮಾರಂಭದ ನೇರ ಪ್ರಸಾರದ ವೀಕ್ಷಣೆಗೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾ ರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು,ಅಂದು ನಗರದ ತರಾಸು ರಂಗಮಂ ದಿರದಲ್ಲಿ ಏರ್ಪಡಿಸಿರುವ ಕಾರ‌್ಯಕ್ರಮದಲ್ಲಿ ಜಿಲ್ಲಾಉಸ್ತುವಾರಿ ಸಚಿವ ಡಿ.ಸುಧಾಕರ್ ಸೇರಿದಂತೆ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್‌ಗಳು,ಗ್ರಾಪಂಗಳ ವ್ಯಾಪ್ತಿಯಲ್ಲಿ ಯೋಜನೆಗೆ ಚಾಲನೆ ನೀಡುವ ಕಾರ‌್ಯಕ್ರಮಗಳನ್ನು ಆಯೋಜಿಸ ಬೇಕು.ಶಾಲಾವರಣದಲ್ಲಿ ಕಾರ‌್ಯಕ್ರಮಗಳನ್ನು ಏರ್ಪಡಿಸಬಾರದು.
ರಾಜ್ಯಮಟ್ಟದಲ್ಲಿ ಮೈಸೂರಲ್ಲಿ ನಡೆಯವ ಕಾರ‌್ಯಕ್ರಮದ ವೀಕ್ಷಣೆಗೆ ಅನುಕೂಲವಾಗುವಂತೆ ಎಲ್‌ಇಡಿ ಪರದೆಗಳು,ಇಂಟರ್‌ನೆಟ್ ವ್ಯ ವಸ್ಥೆ ಸಿದ್ಧಪಡಿಸಿಕೊಳ್ಳಬೇಕು. ನೋಂದಾಯಿತ ಫಲಾನುಭವಿಗಳು ಕಾರ‌್ಯಕ್ರಮಗಳಲ್ಲಿ ಭಾಗವಹಿಸಬೇಕು. ಮಂಜೂರು ಪತ್ರಗಳು ನಿಗದಿತ ಅವಧಿಯೊಳಗೆ ಸಿದ್ಧಗೊಂಡಿರಬೇಕು. ಶಿಷ್ಟಾಚಾರದ ಉಲ್ಲಂಘನೆಯಾಗಬಾರದು ಹಾಗೂ ಕಾರ‌್ಯಕ್ರಮದ ಯಶಸ್ಸಿಗೆ ನೋಡೆಲ್ ಅಧಿಕಾರಿ ಗಳನ್ನು ನೇಮಿಸಬೇಕೆಂದರು.
ಕಾರ‌್ಯಕ್ರಮದ ಯಶಸ್ಸಿಗೆ ಹೆಚ್ಚಿನ ನಿಗಾ ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಎಡಿಸಿ ಬಿ.ಟಿ.ಕುಮಾ ರಸ್ವಾಮಿ ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್,ಜಿಲ್ಲಾ ನಗರಾಭಿವೃದ್ಧಿ ಕೋಶ ದ ಯೋಜನಾ ನಿರ್ದೇಶ ಕ ಮಹೇಂದ್ರಕುಮಾರ್,ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಮೊದಲಾದ ಅಧಿಕಾರಿಗಳಿದ್ದರು.
(ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು)