ಜಿಲ್ಲೆ

30ರಂದು ಗೃಹಲಕ್ಷ್ಮೀ ಯೋಜನೆಗೆ ಚಾಲನೆ


3.54 ಲಕ್ಷ ಮಹಿಳೆಯರ ನೋಂದಣಿ

ಚಿತ್ರದುರ್ಗ: ರಾಜ್ಯಸರ್ಕಾರ ಗೃಹಲಕ್ಷ್ಮೀ ಯೋಜನೆಗೆ ಆ.30ರಂದು ಮೈಸೂರಿನಲ್ಲಿ ಚಾಲನೆ ದೊರೆಯಲಿದ್ದು,ಈ ಕಾರ‌್ಯಕ್ರಮದ ನೇರ ಪ್ರಸಾರದ ವೀಕ್ಷಣೆಗೆ ಜಿಲ್ಲಾ ಕೇಂದ್ರ,ಗ್ರಾಪಂ ಗಳಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾಡಳಿತ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಚಿತ್ರದುರ್ಗ ನಗರ ಸಭೆಯಿಂದ ಅಂದು ಬೆಳಗ್ಗೆ 11.30ಕ್ಕೆ ನಗರದ ತರಾಸು ರಂಗಮಂದಿರಲ್ಲಿ ಕಾರ‌್ಯಕ್ರಮ ಆಯೋಜಿಸಲಾಗಿದೆ.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಕಾರ‌್ಯಕ್ರಮದ ಘನ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಾರ‌್ಯಕ್ರಮ ಉದ್ಘಾಟಿಸುವರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಶಾಸಕರು,ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತ ರಿರುವರು.
3.54 ಲಕ್ಷ ನೋಂದಣಿ
ಗೃಹಲಕ್ಷ್ಮೀ ಯೋಜನೆಗೆ,ನಗರ ಪ್ರದೇಶದಲ್ಲಿ 59,310 ಹಾಗೂ ಗ್ರಾಮೀಣ ಭಾಗದಲ್ಲಿ 2,95,576 ಸೇರಿ 3,54,886 ಮಹಿಳೆಯುರು ಯೋಜನೆಗೆ ನೊಂದಾಯಿಸಿದ್ದಾರೆ.ಚಿತ್ರದುರ್ಗ ತಾಲೂಕು 82,536 ಚಳ್ಳಕೆರೆ-76,986,ಹಿರಿಯೂರು-63,565 ಹೊಳಲ್ಕೆರೆ-46,999, ಹೊಸದುರ್ಗ-50,580 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 34,220 ಮಹಿಳೆಯರು ನೋಂದಾಯಿಸಿದ್ದಾರೆ. ಜಿಲ್ಲೆ 189 ಗ್ರಾಪಂ ಗಳಲ್ಲೂ ಕಾರ‌್ಯಕ್ರಮದ ನೇರಪ್ರಸಾರವಿರುತ್ತದೆ.