ಜಿಲ್ಲೆ

30ಕ್ಕೆ ಗೀತಗಾಯನ ಕಾರ್ಯಕ್ರಮ

ಮೈಸೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಂಚರ ಮೆಲೋಡೀಸ್ ವತಿಯಿಂದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಅ.30ರಂದು ಸಂಜೆ 6ಕ್ಕೆ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಲಾಗಿದೆ.


ಜನರಿಗೆ ಮುಕ್ತ ಪ್ರವೇಶವಿದ್ದು, ಪ್ರಾಯೋಜಕತ್ವ, ಸಭಾ ಕಾರ್ಯಕ್ರಮ ಇರುವುದಿಲ್ಲ. 3 ಗಂಟೆ ಕಾಲ ಸುಮಧುರ ಗಾಯನ ಇರಲಿದೆ ಎಂದು ಸಂಸ್ಥೆಯ ಪದಾಧಿಕಾರಿ ಮೀರಾ ಶ್ರೀಕಾಂತ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ವೈದ್ಯರು, ಐಟಿ ಹೀಗೆ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವವರು ನಮ್ಮ ತಂಡದಲ್ಲಿದ್ದಾರೆ. ನಾವೆಲ್ಲರೂ ಸ್ವಂತ ಹಣ ಹಾಕಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.