ಕೆ.ಆರ್.ಸಾಗರ: ಬೆಳಗೊಳ ಹೋಬಳಿಯ ಬೆಳಗೊಳ, ಹೊಸ ಆನಂದೂರು, ಮಜ್ಜಿಗೆಪುರ ಮತ್ತು ಕೆ.ಆರ್.ಸಾಗರದ 300 ಕ್ಕೂ ಹೆಚ್ಚು ಜನರಿಗೆ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಶುಕ್ರವಾರ ಹಕ್ಕುಪತ್ರ ವಿತರಿಸಿದರು.
ಬೆಳಗೊಳ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ, ಹಲವು ವರ್ಷಗಳಿಂದ ಮನೆಗಳಿಗೆ ಬದುಕು ನಡೆಸುತ್ತಿದ್ದವರಿಗೆ ಹಕ್ಕುಪತ್ರ ನೀಡಲಾಗಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಕಂದಾಯ ಇಲಾಖೆ ಸೇರಿದಂತೆ ಎಲ್ಲರ ಸಹಕಾರದಿಂದ ಹಕ್ಕುಪತ್ರ ವಿತರಣೆ ಸಾಧ್ಯವಾಗಿದೆ ಎಂದರು.
ವೈಯಕ್ತಿಕ ಲಾಭಕ್ಕಾಗಿ ರಾಜಕಾರಣ ಮಾಡಲು ಬಂದಿಲ್ಲ. ಬದಲಾಗಿ ಬಡವರ ನೋವುಗಳಿಗೆ ಸ್ಪಂದಿಸಲೆಂದು ರಾಜಕೀಯಕ್ಕೆ ಬಂದಿದ್ದೇನೆ ಎಂದು ಪರೋಕ್ಷವಾಗಿ ವಿರೋಗಳಿಗೆ ಟಾಂಗ್ ನೀಡದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆ ಮತ್ತು ಪಂಚಾಯಿತಿ ಸಿಬ್ಬಂದಿಯನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಬೆಳಗೊಳ ಗ್ರಾಪಂ ಸದಸ್ಯರಾದ ಪ್ರಕಾಶ್, ರವಿ, ಪ್ರಕಾಶ್, ಶಿವಕುಮಾರ್ ದ್ರಾಕ್ಷಾಯಿಣಿ, ವೆಂಕಟಲಕ್ಷ್ಮಮ್ಮ, ಕಾಂತರಾಜು, ಕೃಷ್ಣ, ನಾಗಣ್ಣ, ಕೆ.ಆರ್.ಸಾಗರ ಗ್ರಾಪಂ ಅಧ್ಯಕ್ಷ ಕೆ.ನರಸಿಂಹ, ಮುಖಂಡರಾದ ಬಿ.ವಿ.ಲೊಕೇಶ್, ಸ್ವಾಮಿಗೌಡ, ವಿಷಕಂಠ, ತಾಪಂ ಮಾಜಿ ಸದಸ್ಯ ಮಹದೇವಸ್ವಾಮಿ ಇತರರಿದ್ದರು.
ಬೆಳಗೊಳ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಾನುಭವಿಗಳಿಗೆ ಶಾಸಕ ಎ.ಎಸ್.ರವೀಂದ್ರ ಶ್ರೀಕಂಠಯ್ಯ ಹಕ್ಕು ಪತ್ರ ವಿತರಿಸಿದರು.