ಜಿಲ್ಲೆ

300ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ

ಮೈಸೂರು: ಕುವೆಂಪುನಗರದ ಉದಯ ರವಿ ರಸ್ತೆಯಲ್ಲಿರುವ ಜಿಎಸ್‌ಎಸ್ ಸಂಸ್ಥೆಯಲ್ಲಿ ಶುಕ್ರವಾರ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಜಿಎಸ್‌ಎಸ್ ಯೋಗ, ಕ್ರೆಡಾಯ್ ಮಹಿಳಾ ವಿಭಾಗ, ಬ್ಲಡ್ ಆನ್ ಕಾಲ್ ಕ್ಲಬ್, ಆಚಾರ್ಯ ತುಳಸಿ ಆಸ್ಪತ್ರೆ, ಎಎಸ್‌ಜಿ ಕಣ್ಣಿನ ಆಸ್ಪತ್ರೆ, ಜಿತೋ, ಜೀವಧಾರ ರಕ್ತಿನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ರಕ್ತದ ಒತ್ತಡ, ಮಧುಮೇಹ, ಮೂಳೆ ಸಾಂದ್ರತೆ ಪರೀಕ್ಷೆ , ಹಲ್ಲಿನ ತಪಾಸಣೆ, ಕಣ್ಣಿನ ಪರೀಕ್ಷೆ, ಚರ್ಮ ಮತ್ತು ತಲೆ ಕೂದಲ ಪರೀಕ್ಷೆ, ಶ್ವಾಸಕೋಶ ಪರೀಕ್ಷೆ ಮಾಡಲಾಯಿತು.
ನಗರದ ಪ್ರತಿಷ್ಠಿತ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ ಸಿ.ಎಂ. ಬಸವರಾಜು, ಡಾ.ನಾಗಲಕ್ಷ್ಮೀ ಭಟಾಚಾರ್ಯ, ಡಾ.ಮಧುಸೂಧನ್ ಚೌಧರಿ, ಡಾ.ಉಮೇಶ್ ಜೈನ್, ಡಾ. ಪ್ರಕಾಶ್, ಡಾ ವಿದ್ಯಾಶ್ರೀ ಸೇರಿದಂತೆ ಇತರರು ಭಾಗವಹಿಸಿದ್ದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ ನಾನಾ ವಯೋಮಾನದ ಸುಮಾರು 300ಕ್ಕೂ ಹೆಚ್ಚಿನ ಜನರು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.
ರಕ್ತದಾನ ಶಿಬಿರ: ರಕ್ತದಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 50 ಹೆಚ್ಚಿನ ದಾನಿಗಳು ರಕ್ತದಾನ ಮಾಡಿ ಜವಾಬ್ದಾರಿ ಮೆರೆದರು. ಅಪಘಾತ, ತುರ್ತು ಸಂದರ್ಭಗಳಲ್ಲಿ ರೋಗಿಗೆ ರಕ್ತದ ಅವಶ್ಯಕತೆ ತುಂಬ ಇದೆ. ರಕ್ತಕ್ಕೆ ಪರ್ಯಾಯವಾದ ಔಷಧ ಇಲ್ಲ. ಹಾಗಾಗಿ ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಎಂದು ಸಂದೇಶ ಸಾರಿದರು. ಜಿಎಸ್‌ಎಸ್ ಸಂಸ್ಥೆ ಮುಖ್ಯಸ್ಥ ಶ್ರೀಹರಿ, ಟೀಮ್ ಹೆಡ್ ಜಿ.ಬಿ.ರೂಪಶ್ರೀ ಇತರರು ಇದ್ದರು.