ಎನ್.ಆರ್.ಪುರದ ಕುವೆಂಪು ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಅತಿವೃಷ್ಠಿಯಿಂದ ಶೃಂಗೇರಿ ಕ್ಚೇತ್ರದಲ್ಲಿ 300 ಕೋಟಿ.ರೂ. ಹಾನಿ

ಎನ್.ಆರ್.ಪುರ: ಸ್ವಾತಂತ್ರ ಬಂದ ನಂತರ ನಮ್ಮ ದೇಶ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಹೊರಹೊಮ್ಮಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.ಕಂಡ ರಾಷ್ಟ್ರ. ಎಲ್ಲ ಧರ್ಮ,ಜಾತಿಯವರು ಒಟ್ಟಾಗಿ ಬದುಕುತ್ತಿದ್ದೇವೆ. ದೇಶದಲ್ಲಿ ಯವಜನರು ಹೆಚ್ಚಾಗಿದ್ದು, ಎಲ್ಲರಿಗೂ ಉದ್ಯೋಗ ಸೃಷ್ಠಿಸಬೇಕಿದೆ. ಈ ವರ್ಷ ಅತಿವೃಷ್ಠಿಯಿಂದ ಶೃಂಗೇರಿ ಕ್ಷೇತ್ರದಲ್ಲಿ 250 ರಿಂದ 300 ಕೋಟಿ ರೂ. ನಷ್ಟ ಉಂಟಾಗಿದೆ. ಕೊಪ್ಪ ತಾಲೂಕಿನಲ್ಲಿ 42, ಎನ್.ಆರ್.ಪುರದಲ್ಲಿ 82 ಹಾಗೂ ಶೃಂಗೇರಿ ತಾಲೂಕಿನಲ್ಲಿ 40ಮನೆ ಕುಸಿದಿದ್ದು, ಎಲ್ಲರಿಗೂ ಪರಿಹಾರ ನೀಡಲಾಗುವುದು ಎಂದರು.
ವಿವಿಧ ಕ್ಷೇತ್ರಗಳ ಸಾಧಕರಾದ ಮಾಜಿ ಸೈನಿಕ ಎಲ್.ಲೋಕೇಶ್, ಎಎಸ್‌ಐ ನಾಗರಾಜ ಹಾಗೂ ರಾಜಪ್ಪ ಅವರನ್ನು ಸನ್ಮಾನಿಸಲಾಯಿತು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಪೂರ್ಣೇಶ್, ಭಾಗ್ಯ ನಂಜುಂಡಸ್ವಾಮಿ, ಸದಸ್ಯರಾದ ಜುಬೇದ, ಸುರೈಯಾಭಾನು, ಮಹಮ್ಮದ್ ವಸೀಂ, ಮುನಾವರ್ ಪಾಷಾ, ಉಮಾ ಕೇಶವ, ರೇಖಾ, ರೀನಾ, ಕೆ.ಆರ್.ಪುಷ್ಪಾ, ಎಂ.ಪಿ.ಮನು, ಪ್ರೇಮ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ ಇದ್ದರು.