ಬಾಳೆಹೊನ್ನೂರು: ರಾಜ್ಯದ ವಿವಿಧೆಡೆ ರೈತರು ಯೂರಿಯಾ ರಸಗೊಬ್ಬರಕ್ಕೆ ಪರದಾಡುತ್ತಿರುವ ಸಂದರ್ಭದಲ್ಲಿ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವಗೋಡು ಸುಭಾಷ್ ನಗರದಲ್ಲಿ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 300 ಚೀಲ ಯೂರಿಯಾ ರಸಗೊಬ್ಬರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇವಗೋಡು ಸುಭಾಷ್‌ನಗರದ ನಿವಾಸಿ ಚಾಲಕ ವಿಲ್ಫ್ರೆಡ್ ಎಂಬಾತ ತನ್ನ ಮನೆಯಲ್ಲಿ ಅನುಮತಿ ಇಲ್ಲದೇ 300 ಚೀಲ ಯೂರಿಯಾ ರಸಗೊಬ್ಬರವನ್ನು ದಾಸ್ತಾನು ದಾಸ್ತಾನು ಮಾಡಿದ್ದನ್ನು. ಗುರುವಾರ ಅದನ್ನು ಗುರುವಾರ ಲಾರಿಗೆ ಲೋಡ್ ಮಾಡಲಾಗುತಿತ್ತು. ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಕೃಷಿ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಯೂರಿಯಾ ರಸಗೊಬ್ಬರವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.