ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ಬಸವೇಶ್ವರ ಭವನ ನಿರ್ಮಾಣ ಕಾಮಗಾರಿಗೆ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು. ಮಲೆಯೂರು ನಾಗೇಂದ್ರ, ಮೂಡ್ನಾಕೂಡು ಪ್ರಕಾಶ್, ಕೆರೆಹಳ್ಳಿ ವೆಂಕಟೇಶ್, ಎಂ.ಬಿ.ಶಿವಮಲ್ಲಪ್ಪ, ಹರವೆ ಸುರೇಶ್ ಇತರರಿದ್ದರು. 
ಜಿಲ್ಲೆ

30 ಲಕ್ಷ ರೂ. ವೆಚ್ಚದಲ್ಲಿ ಬಸವೇಶ್ವರ ಭವನ ನಿರ್ಮಾಣ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿರುವ, ಚಾಮರಾಜನಗರ ತಾಲೂಕಿನ ಮೂಡ್ನಾಕೂಡಿನ ಹೊರವಲಯಲ್ಲಿರುವ ಶ್ರೀ ಕಲ್ಯಾಣ ಬಸವೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ವಾಣ ಕಾಮಗಾರಿಗೆ ಶಾಸಕ ಸಿ.ಎಸ್.ನಿರಂಜನಕುವಾರ್ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.

ಶ್ರೀ ಕಲ್ಯಾಣಬಸವೇಶ್ವರ ದೇವಸ್ಥಾನ ಬಹಳ ಪ್ರಸಿದ್ಧಿ ಪಡೆದಿದೆ. ಮೂಡ್ನಾಕೂಡು ಗ್ರಾಮಸ್ಥರು ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅನೇಕ ಕಡೆಗಳಿಂದ ಬರುವ ಭಕ್ತರು ಹಾಗೂ ಮೂಡ್ನಾಕೂಡು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಳಿದುಕೊಳ್ಳಲು ಭವನ ನಿರ್ವಾಣವಾಗುತ್ತಿದೆ. ದೇವಸ್ಥಾನದಲ್ಲಿ ಮದುವೆ ಹಾಗೂ ಶುಭಕಾರ್ಯಗಳನ್ನು ನೆರವೇರಿಸಲು ಈ ಭವನ ಹೆಚ್ಚು ಉಪಯುಕ್ತವಾಗಿದೆ ಎಂದರು.

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 10 ಲಕ್ಷ ರೂ. ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ಭವನ ನಿರ್ವಾಣಕ್ಕೆ ಅನುಕೂಲವಾಗುವಂತೆ ನಿರ್ಮಿತ ಕೇಂದ್ರಕ್ಕೆ ಕ್ರಿಯಾಯೋಜನೆ ರೂಪಿಸಿ, ಸುಸಜ್ಜಿತ ಭವನ ನಿರ್ಮಿಸಿಕೊಳ್ಳುವಂತೆ ತಿಳಿಸಿದರು.

ಮೂಡ್ನಾಕೂಡು ಗ್ರಾಮದ ದಲಿತ ಮುಖಂಡರ ಮನವಿಯಂತೆ ಬೀದಿಯಲ್ಲಿ ವಾರಮ್ಮ ದೇವಸ್ಥಾನ ನಿರ್ವಾಣ ಹಾಗೂ ಸ್ಮಶಾನ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಗೌರಿಕಟ್ಟೆಯನ್ನು ಕೆರೆಯಾಗಿ ಪರಿವರ್ತನೆ ವಾಡಲಾಗಿದೆ. ಈ ಕೆರೆಗೆ ನೀರು ತುಂಬಿಸಲು ಕ್ರಮ ವಹಿಸುತ್ತೇನೆ. ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆ ಹಾಗೂ ಇತರ ಬಡಾವಣೆಗಳ ರಸ್ತೆಗಳ ಅಭಿವದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಮಲೆಯೂರು ಗ್ರಾಪಂ ಅಧ್ಯಕ್ಷೆ ಚಿಕ್ಕತಾಯಮ್ಮ, ಸದಸ್ಯರಾದ ರಾಜಪ್ಪ, ಎಂ.ಎಂ.ಗಿರೀಶ್, ಪಾರ್ವತಮ್ಮ, ಪಂಕಜಾ, ನಾಗೇಂದ್ರಸ್ವಾಮಿ, ವಾದೇಶ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರವೆ ಮಹೇಶ್, ಮುಖಂಡರಾದ ಮಲೆಯೂರು ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಕೆರೆಹಳ್ಳಿ ವೆಂಕಟೇಶ್, ಎಂ.ಬಿ.ಶಿವಮಲ್ಲಪ್ಪ, ಹರವೆ ಸುರೇಶ್, ನಟರಾಜು, ಹಳೇಪುರ ನಟರಾಜು, ಮೂಡ್ನಾಕೂಡು ಲಿಂಗಣ್ಣ, ನಾಗಭೂಷನ್, ರೇವಣ್ಣ, ನಾಗೇಂದ್ರ ಪ್ರಸಾದ್, ಡೇರಿ ಅಧ್ಯಕ್ಷ ಬಸಪ್ಪ, ಕುವಾರ್ ಕೆಂಡಾ, ಪಿಡಿಒ ಶ್ರುತಿ ಇದ್ದರು.