ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೨೦ ವರ್ಷಗಳಿಂದ ನೀರು ಸರಬರಾಜು ಕೆಲಸ ನಿರ್ವಹಿಸುತ್ತಿದ್ದ ೩೫೮ ನೌಕರರರಲ್ಲಿ ಮೊದಲ ಹಂತದಲ್ಲಿ ೮೨ ಜನರನ್ನು ಮಾ. ೧ರಿಂದ ಕೆಲಸಕ್ಕೆ ಮರುನೇಮಕ, ಇನ್ನುಳಿದವರನ್ನು ಹಂತಹAತವಾಗಿ ನೇಮಕ ಮತ್ತು ೪ ತಿಂಗಳ ವೇತನವನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಅರವಿಂದ ಬೆಲ್ಲದ ಮಂಗಳವಾರ ಭರವಸೆ ನೀಡಿದರು. ಇದರಿಂದಾಗಿ ಪಾಲಿಕೆ ಆವರಣದಲ್ಲಿ ೩೦ ದಿನಗಳಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ನೌಕರರು ಹೋರಾಟವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬೆಲ್ಲದ, ಸರದಿ ಉಪವಾಸ ನಿರತರಿಗೆ ಎಳನೀರು ಕುಡಿಸಿದರು. ನೌಕರರ ಮರುನಿಯುಕ್ತಿ ಕುರಿತು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರಿಂದ ಹೋರಾಟದ ನೇತೃತ್ವ ವಹಿಸಿದ್ದ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಧರಣಿ ನಿರತರಿಗೆ ಸಿಹಿ ತಿನ್ನಿಸಿದರು.
ಇದಕ್ಕೂ ಮೊದಲು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ೮೨ ಜನರಿಗೆ ನೇಮಕಾತಿ ಭರವಸೆ ನೀಡಿದ್ದರು. ಇನ್ನುಳಿದವರ ನೇಮಕದ ಬಗ್ಗೆ ಚಕಾರ ಎತ್ತಿರಲಿಲ್ಲ. ಸಂಜೆ ತೆರಳಿದ್ದ ಶಾಸಕ ಬೆಲ್ಲದ, ೮೨ ಜನರನ್ನು ಮÁ. ೧ರಿಂದ ನೀರಿನ ಸಮಸ್ಯೆ ಇರುವ ವಾರ್ಡ್ಗಳಲ್ಲಿ ಕೆಲಸಕ್ಕೆ ನಿಯುಕ್ತಿ ಮÁಡಿಕೊಳ್ಳಲು ಸೂಚಿಸಿದರು.
ಈ ವೇಳೆ ಬಸವರಾಜ ಕೊರವರ ಮಾತನಾಡಿ, ಶಾಸಜರ ಭರವಸೆಯಿಂದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗುವುದು. ಇನ್ನುಳಿದವರಿಗೆ ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟ ಅನಿವಾರ್ಯ ಎಂದರು.
ನೀರು ಸರಬರಾಜು ನೌಕರರ ಸಂಘದ ಮಹಾಂತೇಶ ಗೌಡರ, ಆನಂದ ಕಾಳಮ್ಮನವರ, ಬಸವರಾಜ ಮುಕ್ಕಲ, ಶೇಖರ ಬೆಟಗೇರಿ, ಸೂರಿ, ನಾಗೇಂದ್ರ ಹಮ್ಮಣಿ, ಇತರರಿದ್ದರು.