ಜಿಲ್ಲೆ

30 ದಿನ ಮಧ್ಯಂತರ ವಿದ್ಯುತ್​ ವ್ಯತ್ಯಯ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿ ಅಂತರಸನಹಳ್ಳಿ 220 ಕೆವಿ ಸ್ವೀಕರಣಾ ಕೇಂದ್ರದ 100 ಎಂವಿಎ ಸಾಮರ್ಥ್ಯದ ಪರಿವರ್ತಕವು ವಿಫಲವಾಗಿರುವುದರಿಂದ ಸದರಿ ಪರಿವರ್ತಕ ವ್ಯಾಪ್ತಿಯಲ್ಲಿರುವ ಉಪಸ್ಥಾವರಗಳಲ್ಲಿ 30 ದಿನಗಳ ಕಾಲ ಮಧ್ಯಂತರ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ತುಮಕೂರು, ಮೆಳೆಕೋಟೆ, ಬಡ್ಡಿಹಳ್ಳಿ, ಊರ್ಡಿಗೆರೆ, ಸಿಟಿಕೆರೆ, ಅಂತರಸನಹಳ್ಳಿ, ಬೆಳಧರ, ಬೆಳ್ಳಾವಿ, ಹಿರೇಹಳ್ಳಿ, ಹೊನ್ನುಡಿಕೆ, ಹೆಗ್ಗೆರೆ, ಮಲ್ಲಸಂದ್ರ, ದೊಡ್ಡಸಾರಂಗಿ, ಚೇಳೂರು, ಹಾಗಲವಾಡಿ, ಹೊಸಕೆರೆ ಹಾಗೂ ನಂದಿಹಳ್ಳಿ ಕ್ರಾಸ್​ನಲ್ಲಿರುವ ಐಪಿ ಫೀಡರ್​ಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ.

ಕೆಲವು ಸಂದರ್ಭದಲ್ಲಿ ನಗರದ ಫೀಡರ್​, ಕೈಗಾರಿಕಾ ಫೀಡರ್​ ಹಾಗೂ ನಿರಂತರ ಜ್ಯೋತಿ ಫೀಡರ್​ಗಳಲ್ಲಿಯೂ ಸಹ ವ್ಯತ್ಯಯ ಉಂಟಾಗಲಿದೆ. ಪರಿವರ್ತಕ ದುರಸ್ತಿಗೊಳಿಸಲು ಕನಿಷ್ಟ 30 ದಿನಗಳ ಕಾಲಾವಕಾಶ ಬೇಕಾಗಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಿದೆ.