ಹೊಳೆನರಸೀಪುರ : ಬೀಗದ ಕೀ ಇಟ್ಟಿದ್ದ ಜಾಗ ನೋಡಿಕೊಂಡಿದ್ದ ಕಳ್ಳರು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೀ ನೆರವಿನಿಂದ ಒಳನುಗ್ಗಿ 53 ಗ್ರಾಂ ಚಿನ್ನಾಭರಣ ಹಾಗು 10 ಸಾವಿರ ರೂ. ನಗದು ಕಳವು ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಭಾಗ್ಯ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಜೂ. 12 ರಂದು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಅವರು ಮನೆಯ ಬೀಗದ ಕೀಯನ್ನು ಹೂವಿನ ಗಿಡದೊಳಗೆ ಇಟ್ಟಿದ್ದರು. ಸಂಜೆ 5 ಗಂಟೆಗೆ ಮನೆಗೆ ವಾಪಾಸ್ಸಾಗಿದ್ದು ಮಾರನೇ ದಿನ ಬೀರು ಪರಿಶೀಲಿಸಿದಾಗ ವಿಚಾರ ಗೊತ್ತಾಗಿದೆ. 30 ಗ್ರಾಂ ತೂಕದ ಚಿನ್ನದ ನೆಕ್ಲೇಸ್, 15 ಗ್ರಾಂ ತೂಕದ ಓಲೆ ಜುಮುಕಿ, 8 ಗ್ರಾಂನ ಚಿನ್ನದ ಹ್ಯಾಂಗಿಂಗ್ ಮತ್ತು ಓಲೆ ಕಳವು ಮಾಡಿದ್ದು ಚಿನ್ನಾಭರಣಗಳ ಒಟ್ಟು ಬೆಲೆ 3 ಲಕ್ಷ ರೂ. ಆಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.