ಸಮೀರವಾಡಿ-ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆ ಕೇನ್ ಕ್ಯಾರಿಯರ್‌ನಲ್ಲಿ ಕಬ್ಬು ಹಾಕಿ ಪ್ರಸಕ್ತ ಸಾಲಿನ ಹಂಗಾಮಿಗೆ ಚಾಲನೆ ನೀಡಲಾಯಿತು. ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್.ಬಕ್ಷಿ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ ಇದ್ದರು. 
ಜಿಲ್ಲೆ

ಟನ್ ಕಬ್ಬಿಗೆ 3 ಸಾವಿರ ರೂ.

ದತ್ತಾತ್ರೇಯ ಪಿ ಕುಲಕರ್ಣಿ

ಮಹಾಲಿಂಗಪುರ: ಸಮೀಪದ ಸಮೀರವಾಡಿ-ಸೈದಾಪುರ ಗೋದಾವರಿ ಬಯೋರಿಫೈನರೀಜ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯಲ್ಲಿ ಹೋಮ-ಹವನ ಜತೆಗೆ ಕಬ್ಬು ನುರಿಸುವ ಯಂತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಬಕ್ಷಿ ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ ಪ್ರತಿ ಟನ್ ಕಬ್ಬಿಗೆ ರೂ.3 ಸಾವಿರ ರೂ. ನೀಡಲಾಗುವುದು. ರೈತರು ಗುಣಮಟ್ಟದ, ಸ್ವಚ್ಛವಾದ ಕಬ್ಬು ಕಾರ್ಖಾನೆಗೆ ಪೂರೈಸಿಸುತ್ತೀರಿ ಎಂಬ ನಂಬಿಕೆ ಇದೆ. ರೈತರ ವಿಶ್ವಾಸವುಳ್ಳ ಕಾರ್ಖಾನೆ ಇದಾಗಿದೆ. ರೈತರ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದೆ. ಪ್ರಸಕ್ತ ಹಂಗಾಮಿನಲ್ಲಿ 28 ರಿಂದ 29 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಕಾರ್ಖಾನೆ ಸೇವೆಯಿಂದ ನಿವತ್ತಿ ಆಗುತ್ತಿರುವ 18 ಜನ ಕಾರ್ಮಿಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಖಾನೆ ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ. ಇಂಜಿನಿಯರ್ ವಿಭಾಗದ ಜಿಎಂ ವಿ.ಕೆ.ಕಿಲಾರಿ, ಕೇನ್ ಜಿಎಂ ವಿ.ಎನ್. ಕಣಬೂರ, ಡಿಜಿಎಂ ಅಮಿತ್ ತ್ರಿಪಾಠಿ, ಎಂ. ರಾಮಚಂದ್ರ. ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ, ರೈತ ಮುಖಂಡರಾದ ಬಿ.ಜಿ.ಹೊಸೂರ, ಲಕ್ಷ್ಮಣ ಹುಚರಡ್ಡಿ, ಮಹಾದೇವ ಮಾರಾಪುರ, ಈರಣ್ಣ ಕನಕರಡ್ಡಿ, ಮಹಾಲಿಂಗಪ್ಪ ಸನದಿ, ಭುಜಬಲಿ ಕೆಂಗಾಲಿ, ಶಿವನಗೌಡ ಪಾಟೀಲ, ಮಹಾದೇವ ನಾಡಗೌಡ, ರಾಮಣ್ಣ ಮಳಲಿ, ಆರ್.ಟಿ.ಬುದ್ನಿ, ಭೀಮಶಿ ಮಗದುಮ್, ವಿ.ಕೆ.ಪಾಟೀಲ, ಮಲ್ಲಪ್ಪ ರೊಡ್ಡನ್ನವರ, ಕಿಶೋರ್ ಮಸೂರಕರ್, ಡಾ.ಮಾಧವ್ ಬಕ್ಷಿ, ಮಜದೂರ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ, ಬಸವರಾಜ ಭದ್ರಶೆಟ್ಟಿ, ವಿಜಯಕುಮಾರ ಕಣವಿ, ರಾಮಚಂದ್ರ ಸೋನವಾಲ್ಕರ ಇದ್ದರು. ಹೋಮ ಹವನ ಪೂಜಾ ಕಾರ್ಯಕ್ರಮದಲ್ಲಿ ನಿರ್ಮಲಕುಮಾರ ಝಾ ಹಾಗೂ ಪುಂಡಲೀಕ ಬಾಗೇವಾಡಿ ದಂಪತಿಗಳು ಭಾಗಿಯಾಗಿದ್ದರು.