ಹುಬ್ಬಳ್ಳಿ: ಪಾರ್ಟ್ ಟೈಮ್ ಉದ್ಯೋಗ ಮತ್ತು ಹೂಡಿಕೆ ಹೆಸರಿನಲ್ಲಿ ನಗರದ ವ್ಯಕ್ತಿಯೊಬ್ಬರಿಂದ 3.01 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಆರ್. ದಿಲೀಪ್ ಎಂಬುವವರಿಗೆ ಪ್ರಿಯಾ, ಶಹಾಜಿ ಜಾಧವ, ಗಿರಿರಾಜ ರಜಪೂತ ಎಂಬುವವರು ಸೇರಿ ಮೋಸ ಮಾಡಿದ್ದಾರೆ.
ಟೆಲಿಗ್ರಾಂ ಆ್ಯಪ್ ಮೂಲಕ ಸಂಪರ್ಕಿಸಿದ್ದ ಇವರು ಆ್ಯಪ್ ಮೂಲಕ ಮಾಹಿತಿ ರವಾನಿಸುತ್ತಿದ್ದರು. ಅಮೆಜಾನ್ ಇಂಡಿಯಾ ಬೆನಿಫಿಟ್ಸ್ ಎನ್ನುವ ಗ್ರೂಪ್‌ಗೆ ಸೇರಿಸಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಅಶೋಕನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.