ತುಮಕೂರು: ರಸ್ತೆ ಬದಿಯಲ್ಲಿ ಪಂಕ್ಚರ್ ಆಗಿ ನಿಂತಿದ್ದ ಲಾರಿಗೆ ಹಿಂದಿನಿಂದ ಮತ್ತೂಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡು ಲಾರಿಗಳ ಚಾಲಕರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 48 ರಸ್ತೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿ ನಗರದ ಕ್ರಾಸ್ ಬಳಿ ಸಂಭವಿಸಿದೆ.
ಶನಿವಾರ ತಡರಾತ್ರಿ 1.30ರಲ್ಲಿ ಈ ಘಟನೆ ನಡೆದಿದೆ. ಹೊಸ ಪೇಟೆಯಿಂದ ತಮಿಳುನಾಡಿಗೆ ಭತ್ತ ಕಟ್ ಮಾಡುವ ಯಂತ್ರದ ವಾಹನವನ್ನು ತೆಗೆದುಕೊಂಡು ಹೋಗುತ್ತಿದ್ದ ಐಶ್ಚರ್ ಲಾರಿ ಪಂಕ್ಚರ್ ಅಗಿ ನಿಂತಿದ್ದು ಟೈರ್ ಬದಲಾಯಿಸುವ ವೇಳೆ ಹಿಂದಿನಿಂದ ಬಂದ ಮತ್ತೂಂದು ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ಮೂರು ಜನ ಮೃತಪಟ್ಟಿದ್ದಾರೆ. ಪಂಕ್ಚರ್ ಆಗಿ ನಿಂತಿದ್ದ ಲಾರಿಯ ಚಾಲಕ ಶ್ರೀನಿವಾಸ್ (35) ಹಾಗೂ ಮಹೇಶ್ (38) ಹಾಗೂ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಲಾರಿಯ ಚಾಲಕ ನಿಂಗರಾಜು (40) ಮೃತರು.
ಸ್ಥಳಕ್ಕೆ ಶಿರಾ ಗ್ರಾಮಾಂತರ ಡಿವೈಎಸ್ಪಿ ಕುಮಾರಪ್ಪ, ವೃತ್ತ ನಿರೀಕ್ಷಕ ರವಿಕುಮಾರ್, ಕಳ್ಳಂಬೆಳ್ಳ ಪಿಎಸ್ಸೈ ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..