ಜಿಲ್ಲೆ

ಉಜಿರೆಯಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಮೂವರ ಬಂಧನ

ಕರಿಯಪ್ಪ ಅರಳಿಕಟ್ಟಿ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಬುಧವಾರ ದೇಶ ವಿರೋಧಿ ಘೋಷಣೆ ಕೂಗಿರುವ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.


ಉಜಿರೆಯ ಮತ ಎಣಿಕೆ ಕೇಂದ್ರದ ಬಳಿ ಗುರುವಾರ ವಿಜಯೋತ್ಸವ ನಡೆಸಿದಾಗ ಎಸ್ಡಿಪಿಐ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದು ಈ ವೇಳೆ ಪಾಕಿಸ್ತಾನ ಜಿಂದಾಬಾದ್ ಎನ್ನುವುದು ಕೇಳಿಬಂದಿತ್ತು.


ಈ ಕುರಿತ ವಿಡಿಯೊ ತುಣುಕು ಕೂಡಾ ವೈರಲ್ ಆದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ವಿಡಿಯೋವನ್ನು ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದ್ದೂ ಅಲ್ಲದೆ ಇತರ ಎರಡು ವಿಡಿಯೊ ಕೂಡಾ ಲಭ್ಯವಾಗಿದೆ.
ಅವುಗಳನ್ನೂ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಪ್ರಕರಣದ ತನಿಖೆಯ ಆಧಾರದಲ್ಲಿ ಹಾಗೂ ಸಂಗ್ರಹಿಸಲಾಗಿರುವ ಸಾಕ್ಷ್ಯಗಳ ಅಧಾರದಲ್ಲಿ ಪಿಲಿಚಂಡಿ ಕಲ್ಲು ಕುವೆಟ್ಟು ನಿವಾಸಿಗಳಾದ ಮೊಹಮ್ಮದ್ ಹರ್ಷದ್( 22 ), ದಾವೂದ್ ( 36) ಹಾಗೂ ಇಸಾಕ್ (28) ಎಂಬವರನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ.