ಯಳಂದೂರು: ತಾಲೂಕಿನ ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 3.68 ಲಕ್ಷ ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಬಸವರಾಜು ತಿಳಿಸಿದರು.
ತಾಲೂಕಿನ ಗೌಡಹಳ್ಳಿ ಗ್ರಾಮದ ಸಂಘದ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಮಾರ್ಚ್ ಅಂತ್ಯಕ್ಕೆ ಸಂಘದ ವತಿಯಿಂದ 315 ಜನರಿಗೆ 3.27 ಕೋಟಿ ರೂ.ಕೆಸಿಸಿ ಬೆಳೆಸಾಲ ವಿತರಿಸಲಾಗಿದೆ. 126 ಹೈನುಗಾರರಿಗೆ ತಲಾ 20 ಸಾವಿರ ರೂ.ನಂತೆ 25.68 ಲಕ್ಷ ರೂ. ವಿತರಣೆ ಮಾಡಲಾಗಿದೆ. ಇದರೊಂದಿಗೆ ಡಿಸಿಸಿ ಬ್ಯಾಂಕ್‌ನಲ್ಲಿ 45 ಲಕ್ಷ ರೂ. ಠೇವಣಿ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಈವರೆಗೆ ಪಡಿತರದಲ್ಲಿ 3.18 ಲಕ್ಷ ರೂ.ಲಾಭ ಗಳಿಸಿದ್ದು, ಸೀಮೆಎಣ್ಣೆ ಹಾಗೂ ರಸಗೊಬ್ಬರ ಮಾರಾಟದಿಂದಲೂ ಸಂಘಕ್ಕೆ ಲಾಭ ಬಂದಿದೆ. ಸಂಘವನ್ನು ಇನ್ನಷ್ಟು ಲಾಭದತ್ತ ಕೊಂಡೊಯ್ಯಲು ಕ್ರಮ ವಹಿಸಲಾಗುವುದು ಎಂದರು.
ಉಪಾಧ್ಯಕ್ಷ ಎಂ.ಬಸವರಾಜು, ನಿರ್ದೇಶಕರಾದ ಶಂಭುಲಿಂಗಪ್ಪ, ಎಂ.ರವಿ, ರಾಜಶೇಖರ್, ಎಂ.ಸಿದ್ದರಾಜು, ಶಿವರುದ್ರಪ್ಪ, ನಟರಾಜು, ಮಹದೇವಯ್ಯ, ಪಾಪಣೇಗೌಡ, ರಂಗನಾಯಕ, ಜಯಮ್ಮ, ಹಿರಿಯ ಮೇಲ್ವಿಚಾರಕ ಕೆ.ಲಿಂಗರಾಜು, ಪ್ರಭಾರ ಇಒ ಎಂ. ರಂಗಸ್ವಾಮಿ, ಎಸ್.ಮಾದೇಶ್, ಜಿ.ವೈ.ಶಶಿಕಿರಣ್, ಎಂ.ಪ್ರಮೋದ್ ಇದ್ದರು.