ಮಂಗಳೂರು: ಡ್ರಗ್ಸ್ ಬೇಟೆ ಮುಂದುವರಿಸಿದ ಮಂಗಳೂರು ಪೊಲೀಸರು ಬೆಂಗಳೂರಿಗೆ ತೆರಳಿ ಬೀದರಹಳ್ಳಿಯಿಂದ 3.50 ಲಕ್ಷ ರೂ.ಮೌಲ್ಯದ 55 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.
ಈಗಾಗಲೇ ಬಂಧಿತ ನೈಜೀರಿಯಾ ಪ್ರಜೆ ಪೌಲ್ ಒಹಮೊಬಿ ಹಾಗೂ ಕೇರಳದ ಮಹಮ್ಮದ್ ರಮೀಝ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಮತ್ತಷ್ಟು ಮಾಹಿತಿಗಳು ಪೊಲೀಸರಿಗೆ ಲಭಿಸಿದೆ.
ಅದರಂತೆ ಬೆಂಗಳೂರಿಗೆ ತೆರಳಿದ. ಪೊಲೀಸ್ ತಂಡ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ವಶಕ್ಕೆ ಪಡೆದಿದೆ. ಮಂಗಳೂರು ಕಡೆಗೆ ಸಾಗಾಟ ಮಾಡಲು ಕಾರಿನಲ್ಲಿ ಇಡಲಾಗಿದ್ದ 55 ಗ್ರಾಂ ಎಂಡಿಎಂಎ ಸಹಿತ ಕಾರು ಹಾಗೂ 70 ಸಾವಿರ ರೂ.ವಶಕ್ಕೆ ಪಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.